ಮದುವೆಯಾದ ಕೆಲವೇ ಹೊತ್ತಿನಲ್ಲಿ ಪ್ರೇಮಿಯೊಂದಿಗೆ ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ ಪೋಷಕರು! - Mahanayaka
4:53 PM Wednesday 10 - September 2025

ಮದುವೆಯಾದ ಕೆಲವೇ ಹೊತ್ತಿನಲ್ಲಿ ಪ್ರೇಮಿಯೊಂದಿಗೆ ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ ಪೋಷಕರು!

marriage
22/09/2021

ಪಾಟ್ನಾ: ತಂದೆಯೋರ್ವ ತನ್ನ ಮಗಳು ತಾನು ಇಷ್ಟ ಪಟ್ಟವನನ್ನು ಮದುವೆಯಾದಳು ಎನ್ನುವ ಕಾರಣಕ್ಕೆ ಮದುವೆಯಾಗಿ ಕೆಲವೇ ಹೊತ್ತಿನಲ್ಲಿ ಮಗಳನ್ನು ಹಾಗೂ ಯುವಕನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬಿಹಾರದ ಜಮುಯಿ ಜಿಲ್ಲೆಯಲ್ಲಿ ನಡೆದಿದೆ.


Provided by

ಹತ್ಯೆಗೀಡಾಗಿರುವ ಜೋಡಿಯು ಒಂದೇ ಸಮುದಾಯದವರಾಗಿದ್ದರು. ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಪೋಷಕರಿಗೆ ಹೆದರಿ ಗುಟ್ಟಾಗಿ ಮದುವೆಯಾಗಲು ನಿರ್ಧರಿಸಿದ್ದು,  ಹುಡುಗಿಯು  ಕೆಲಸವಿದೆ ಎಂದು ಹೊರಟಿದ್ದರೆ, ಯುವಕ ಸಕ್ಕರೆ ತರುವ ನೆಪದಲ್ಲಿ ಮನೆಯಿಂದ ಹೊರ ಬಂದಿದ್ದ. ಬಳಿಕ ಇಲ್ಲಿನ ದೇವಸ್ಥಾನವೊಂದರಲ್ಲಿ ಇಬ್ಬರು ಕೂಡ ವಿವಾಹವಾಗಿದ್ದಾರೆ.

ಇವರ ವಿವಾಹವನ್ನು ನೋಡಿದ್ದ ಕೆಲವರು ಹುಡುಗಿಯ ತಂದೆಗೆ ವಿಷಯ ಮುಟ್ಟಿಸಿದ್ದಾರೆ. ಈ ವೇಳೆ ತಕ್ಷಣವೇ ತಂದೆ ಹಾಗೂ ಸಹೋದರ ಸಂಬಂಧಿಗಳು ಸ್ಥಳಕ್ಕೆ ಆಗಮಿಸಿ, ಕರುಣೆ ಅನ್ನೋ ಪದಕ್ಕೆ ಅರ್ಥವೇ ಇಲ್ಲದವರಂತೆ, ಹುಡುಗ ಮತ್ತು ಹುಡುಗಿ ಇಬ್ಬರನ್ನೂ ಭೀಕರವಾಗಿ ಹತ್ಯೆ ಮಾಡಿ ಮರಕ್ಕೆ ನೇಣು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಮಸ್ಥರಿಂದ ಮಾಹಿತಿ ಪಡೆದ ಪೊಲೀಸರು ಪರಿಶೀಲನೆ ನಡೆಸಿದ್ದು, ಬಾಲಕಿಯ ತಂದೆಯನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಜಮುಯಿ ಪೊಲೀಸ್ ವರಿಷ್ಠಾಧಿಕಾರಿ ಪ್ರಮೋದ್ ಕುಮಾರ್ ಮಂಡಲ್ ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HpGUvPNd4TWBQJG8MXH5on

ಇನ್ನಷ್ಟು ಸುದ್ದಿಗಳು…

ಗೆಳೆಯನ ಜೊತೆಗೆ ಗೋವಾ ಪ್ರವಾಸಕ್ಕೆ ತೆರಳಿದ್ದ ನಟಿ ಕಾರು ಅಪಘಾತದಲ್ಲಿ ದಾರುಣ ಸಾವು!

ಗೋಬಿ ಮಂಚೂರಿ, ಎಗ್ ರೈಸ್ ಕೊಡಿಸುವ ನೆಪದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ!

ಜಾತಿ ಪೀಡೆಗಳನ್ನು ಮಟ್ಟ ಹಾಕಲು ನಡೆಯಲಿದೆ ಗುಪ್ತ ಸಮೀಕ್ಷೆ: ಅಸ್ಪೃಶ್ಯತೆ ಆಚರಿಸಿದರೆ ಜೈಲೂಟ ಗ್ಯಾರೆಂಟಿ

ತರಗತಿ ಕೋಣೆಯಲ್ಲಿಯೇ ಮಹಿಳೆಯೊಂದಿಗೆ ಅಸಹ್ಯವಾಗಿ ನಡೆದುಕೊಂಡ ಮುಖ್ಯ ಶಿಕ್ಷಕ | ವಿಡಿಯೋ ವೈರಲ್

ಮಲ್ಪೆ ಬೀಚ್ ನಲ್ಲಿ ನೀರಿನ ಸೆಳೆತಕ್ಕೆ ಸಿಲುಕಿದ ಮೂವರು ಪ್ರವಾಸಿಗರು

ಪಾರ್ಟಿ ಮುಗಿಸಿ ಬರುತ್ತಿದ್ದ ಯುವತಿಯ ಮೇಲೆ ಕ್ಯಾಬ್ ಡ್ರೈವರ್ ನಿಂದ ಅತ್ಯಾಚಾರ!

ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಮುತ್ತಿಟ್ಟವ ಈಗ ಪೊಲೀಸರ ವಶದಲ್ಲಿ: ಪೊಲೀಸರೆದು ಕಣ್ಣೀರಿಟ್ಟು ಆರೋಪಿ ಹೇಳಿದ್ದೇನು?

ಉಂಡು ಮಲಗಿದರೂ ಮುಗಿಯಲಿಲ್ಲ ಗಂಡ ಹೆಂಡಿರ ಜಗಳ: ಪೊಲೀಸ್ ಠಾಣೆ ಎದುರು ಹಿಗ್ಗಾಮುಗ್ಗಾ ಥಳಿತ!

ಇತ್ತೀಚಿನ ಸುದ್ದಿ