ರಾಮ ಮಂದಿರ ನಿರ್ಮಾಣಕ್ಕೆ 5 ಲಕ್ಷದ 100 ರೂ. ದೇಣಿಗೆ ನೀಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ - Mahanayaka
10:29 PM Thursday 12 - December 2024

ರಾಮ ಮಂದಿರ ನಿರ್ಮಾಣಕ್ಕೆ 5 ಲಕ್ಷದ 100 ರೂ. ದೇಣಿಗೆ ನೀಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್

15/01/2021

ದೆಹಲಿ: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವೈಯಕ್ತಿಕವಾಗಿ 5 ಲಕ್ಷದ 100 ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದು, ಈ ಮೂಲಕ ರಾಮಮಂದಿರಕ್ಕೆ ದೇಣಿಗೆ ಸಂಗ್ರಹಕ್ಕೆ ಅವರು ಚಾಲನೆ ನೀಡಿದರು.

ದೇಶದ 4 ಲಕ್ಷ ಹಳ್ಳಿಗಳಿಂದ ದೇಣಿಗೆ ಸಂಗ್ರಹ ನಡೆಯಲಿದ್ದು, ಈ ಅಭಿಯಾನ ಫೆಬ್ರವರಿ 27ರವರೆಗೆ ನಡೆಯಲಿದೆ. ಇಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಸಹ ಅಧ್ಯಕ್ಷ ಗೋವಿಂದ್ ದೇವ್ ಗಿರಿಜಿ ಮಹಾರಾಜ್, ವಿಶ್ವ ಹಿಂದೂ ಪರಿಷತ್ ನ ಕಾರ್ಯನಿರತ ಅಧ್ಯಕ್ಷ ಅಲೋಕ್ ಕುಮಾರ್, ರಾಮಮಂದಿರ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪತುಂಗ ಮಿಶ್ರಾ ಮತ್ತು ಆರೆಸ್ಸೆಸ್ ಮುಖ್ಯಸ್ಥ ಕುಲ್ ಭೂಷಣ್ ಅಹುಜಾ ಅವರ ನಿಯೋಗ ರಾಷ್ಟ್ರಪತಿಯನ್ನು ಭೇಟಿ ಮಾಡಿದರು. ರಾಷ್ಟ್ರಪತಿಗಳು ಈ ದೇಶದ ಪ್ರಥಮ ಪ್ರಜೆ. ಹಾಗಾಗಿ ಅವರಿಂದಲೇ ದೇಣಿಗೆ ಸಂಗ್ರಹ ಆರಂಭಿಸಲು ನಾವು ಭೇಟಿಯಾಗಿದ್ದೇವೆ  ಎಂದು ವಿಶ್ವ ಹಿಂದೂ ಪರಿಷತ್ ನ ಅಲೋಕ್ ಕುಮಾರ್ ತಿಳಿಸಿದರು.

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವ್ರಾಜ್ ಸಿಂಗ್ ಚೌಹಾಣ್ 1 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ನನ್ನ ಕುಟುಂಬ ಕೂಡ ರಾಮಮಂದಿರ ನಿರ್ಮಾಣದಲ್ಲಿ ಪಾಲ್ಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.  ಇನ್ನೂ ಬಿಹಾರದ ಉಪ ಮುಖ್ಯಮಂತ್ರಿ, ಮಸೀದಿ ನಿರ್ಮಾಣದಲ್ಲಿ ಹೇಗೆ ಮುಸ್ಲಿಮರು ಮುನ್ನಲೆಯಲ್ಲಿ ಪಾಲ್ಗೊಳ್ಳುತ್ತಾರೋ ಹಾಗೆಯೇ ರಾಮಮಂದಿರ ನಿರ್ಮಾಣದಲ್ಲಿ ಹಿಒಂದೂಗಳು ಮುನ್ನೆಲೆಯಲ್ಲಿ ಇರುತ್ತಾರೆ. ರಾಮ ಮಂದಿರ ನಿರ್ಮಾಣದಲ್ಲಿ ಎಲ್ಲರೂ ಪಾಲ್ಗೊಳ್ಳಬಹುದು ಎಂದು ಹೇಳಿದರು.

ಇತ್ತೀಚಿನ ಸುದ್ದಿ