ಪ್ರೇಯಸಿಯ ಪತಿಯ‌ನ್ನೇ ಭತ್ತದ ಬಣವೆಯಲ್ಲಿ ಸುಟ್ಟು ಹಾಕಿದ್ದ ಪ್ರಿಯಕರನ ಬಂಧನ​ - Mahanayaka
5:20 AM Wednesday 11 - December 2024

ಪ್ರೇಯಸಿಯ ಪತಿಯ‌ನ್ನೇ ಭತ್ತದ ಬಣವೆಯಲ್ಲಿ ಸುಟ್ಟು ಹಾಕಿದ್ದ ಪ್ರಿಯಕರನ ಬಂಧನ​

fire
06/03/2022

ಬೆಳಗಾವಿ: ಪ್ರೇಯಸಿಯ ಪತಿಯ‌ನ್ನೇ ಭತ್ತದ ಬಣವೆಯಲ್ಲಿ ಸುಟ್ಟು ಹಾಕಿದ್ಧ ಪ್ರಿಯಕರನನ್ನು ಮಾಳಮಾರುತಿ ಠಾಣಾ ಪೊಲೀಸರು ಬಂಧಿಸಿರುವ ಘಟನೆ ಬಗ್ಗೆ ವರದಿಯಾಗಿದೆ.

ಬೆಳಗಾವಿ ತಾಲೂಕಿನ ಕಣಬರಗಿ ನಿವಾಸಿ ಪರಶುರಾಮ ಕುರುಬರ ಬಂಧಿತ ಆರೋಪಿಯಾಗಿದ್ದಾನೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಗಡ ನಿವಾಸಿ ಸಂತೋಷ ಫರೀಟ್ ಹತ್ಯೆಯಾದ ವ್ಯಕ್ತಿ. ಈತನ ಪತ್ನಿ ಜೊತೆ ಪರಶುರಾಮ ಅನೈತಿಕ ಸಂಬಂಧ ಹೊಂದಿದ್ದ. ಅಲ್ಲದೆ, ಆಕೆಯನ್ನು ತನ್ನ ಜೊತೆ ಮನೆಯಲ್ಲಿ ಇರಿಸಿಕೊಂಡಿದ್ದ ಎನ್ನಲಾಗಿದೆ. ಈ ಬಗ್ಗೆ ಅನುಮಾನಗೊಂಡ ಸಂತೋಷ್, ಪತ್ನಿ ಜೊತೆ ಅನೈತಿಕ ಸಂಬಂಧದ ಬಗ್ಗೆ ಸ್ನೇಹಿತ ಪರಶುರಾಮನನ್ನು ಪ್ರಶ್ನಿಸಿದ್ದ.

ಇದರಿಂದ ಕುಪಿತಗೊಂಡ ಪರಶುರಾಮ, ಸಂತೋಷ್​ನನ್ನು ಪುಸಲಾಯಿಸಿ ಬೈಕ್​ನಲ್ಲಿ ಕರೆದುಕೊಂಡು ಹೋಗಿದ್ದಾನೆ. ಮಾಲಿನಿ ನಗರದ ಗದ್ದೆಯೊಂದರ ಬಳಿ ಕಂಠಪೂರ್ತಿ ಮದ್ಯಪಾನ ಮಾಡಿಸಿ, ಟವೆಲ್‌ನಿಂದ ಕತ್ತು ಹಿಸುಕಿ ಸ್ನೇಹಿತ ಕೊಲೆ ಮಾಡಿದ್ದಾನೆ. ಬಳಿಕ ಭತ್ತದ ಬಣವೆಯಲ್ಲಿ ಮೃತದೇಹ ಸುಟ್ಟು ಹಾಕಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಗದ್ದೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರೊಬ್ಬರು ಪೊಲೀಸರಿಗೆ ದೂರು‌ ನೀಡಿದ್ದರು. ಅಲ್ಲದೆ, ಪರಶುರಾಮ, ಸಂತೋಷ ಬೈಕ್‌ನಲ್ಲಿ ತೆರಳುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಮಾಳಮಾರುತಿ ಪೊಲೀಸರು, ಬೈಕ್ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರಾಜ್ಯಮಟ್ಟದ ಲೇಖನ ಸ್ಪರ್ಧೆಯಲ್ಲಿ ಮಹೇಶ ಹೈಕಾಡಿ ಅವರಿಗೆ ದ್ವಿತೀಯ ಸ್ಥಾನ

125 ಮಕ್ಕಳ ಹಾರ್ಟ್​ ಸರ್ಜರಿಗೆ ನೆರವಾಗುತ್ತಿರುವ ಖ್ಯಾತ ನಟ ಮಹೇಶ್​ ಬಾಬು

ಕೋರ್ಟ್ ಆವರಣದಲ್ಲೇ ವಕೀಲರ ಮೇಲೆ ಹಲ್ಲೆ: ಆರೋಪಿಯ ಸೆರೆ

ಕ್ವಾರಿಯಲ್ಲಿ ಗುಡ್ಡ ಕುಸಿತ: 4 ಗಂಟೆಗೂ ಹೆಚ್ಚು ಕಾಲ ಬಂಡೆಯಡಿ ಸಿಲುಕಿ ಬದುಕುಳಿದ ಕಾರ್ಮಿಕ

ಇತ್ತೀಚಿನ ಸುದ್ದಿ