ಗಗನಕ್ಕೇರಿದ ತರಕಾರಿಗಳ ಬೆಲೆ: ಜನರ ಜೇಬಿಗೆ ಮತ್ತಷ್ಟು ಕತ್ತರಿ
ರಾಜ್ಯದಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದೆ. ಬೀನ್ಸ್ ದರ ಈಗ ₹250 ಆಗಿದೆ. ಕಡಿಮೆ ಬೆಲೆಗೆ ಸಿಗುತ್ತಿದ್ದ ಮೂಲಂಗಿ ₹80ಕ್ಕೆ ಏರಿದೆ. ಎಲ್ಲ ತರಕಾರಿಗಳ ಬೆಲೆಯಲ್ಲಿ ₹20 ಏರಿಕೆಯಾಗಿದೆ. ಕೊತ್ತಂಬರಿ ಮತ್ತು ದಂಟಿನ ಸೊಪ್ಪು ಬೆಲೆ ಏರಿಸಿಕೊಂಡಿದೆ. ಈ ತರಕಾರಿ ಬೆಲೆ ಆಷಾಡ ಮಾಸ ಆರಂಭವಾಗುವವರೆಗೂ ಹೆಚ್ಚಳವಾಗಿರಲಿದೆ ಎನ್ನಲಾಗಿದೆ.
ಕಳೆದ ಎರಡು ಮೂರು ತಿಂಗಳು ಮಳೆ ಬೀಳದ ಕಾರಣ ಬೆಳೆ ಬಂದಿಲ್ಲ. ಮದುವೆ-ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿರುವ ಕಾರಣ ತರಕಾರಿ ಬೇಡಿಕೆ ಹೆಚ್ಚಳವಾಗಿದೆ. ಹಾಗೇಯೇ ದರವೂ ಕೂಡ ಹೆಚ್ಚಾಗಿದೆ.
ತೀವ್ರ ತಾಪಮಾನ ಏರಿಕೆ ಮತ್ತು ತೀವ್ರ ವಿದ್ಯುತ್ ಕೊರತೆಯಿಂದ ರೈತರು ತರಕಾರಿ ಬೆಳೆಯಲು ಸಾಧ್ಯವಾಗಿಲ್ಲ. ಅಲ್ಲದೇ, ಅಕಾಲಿಕ ಮಳೆಯ ಹಿನ್ನೆಲೆ, ರೈತರು ಬೆಳೆದ ಅಲ್ಪಸ್ವಲ್ಪ ಬೆಳೆಯೂ ನೆಲಕಚ್ಚಿವೆ. ತರಕಾರಿಗಳು ಬಿಸಿಲಿನ ತಾಪಮಾನಕ್ಕೆ ಬಾಡಿವೆ.
ಪ್ರತಿಯೊಂದು ತರಕಾರಿ ಬೆಲೆಯೂ ಹೆಚ್ಚಳವಾಗಿದ್ದು, ಬಡವರು ಮಧ್ಯಮವರ್ಗದವರು ತರಕಾರಿ ಕೊಳ್ಳಲು ಹೈರಾಣಾಗಿದ್ದಾರೆ. ನಿತ್ಯ 300 ದುಡಿಯುವ ಕೂಲಿ ಕಾರ್ಮಿಕರು ಗ್ರಾಂ ಲೆಕ್ಕದಲ್ಲಿ ತರಕಾರಿ ಖರೀದಿ ಮಾಡುವ ಪರಿಸ್ಥಿತಿ ಎದುರಾಗಿದೆ.
ಬಿನ್ಸ್ ₹240, ಟೊಮೆಟೊ ₹50, ಕ್ಯಾರೇಟ್ ₹80, ಹಾಗಲಕಾಯಿ ₹100, ಬಟಾಣಿ ₹200ಕ್ಕೆ ಏರಿಕೆಯಾಗಿದೆ. ಮೂಲಂಗಿ ಕೂಡ ₹80 ಆಗಿದೆ. ಕೊತ್ತಂಬರಿ ಸೊಪ್ಪು ಒಂದು ಕಟ್ಟಿಗೆ ₹80, ದಂಟಿನ ಸೊಪ್ಪಿನ ಒಂದು ಕಟ್ಟು ₹50 ಆಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth