ಬಲಪಂಥೀಯ ಗುಂಪುಗಳಿಂದ ಪುರೋಹಿತರ ಮೇಲೆ ಹಲ್ಲೆ: ಮನೆಗೆ ನುಗ್ಗಿ ಗೂಂಡಾಗಿರಿ

ತೆಲಂಗಾಣದ ಚಿಲ್ಕೂರ್ ಬಾಲಾಜಿ ಮಂದಿರದ ಮುಖ್ಯ ಪುರೋಹಿತರನ್ನು ಬಲಪಂಥೀಯ ದುಷ್ಕರ್ಮಿಗಳು ತೀವ್ರವಾಗಿ ಥಳಿಸಿದ ಘಟನೆ ನಡೆದಿದೆ. ಫೆಬ್ರವರಿ 7ರಂದು ಇವರ ಮನೆಗೆ ನುಗ್ಗಿದ ಇಬ್ಬರು ವ್ಯಕ್ತಿಗಳು ಇವರನ್ನು ಮನಸೋ ಇಚ್ಛೆ ಥಳಿಸಿದ್ದಾರೆ. ರಾಮರಾಜ್ಯ ಎಂದು ಘೋಷಿಸಿಕೊಂಡಿರುವ ಈಕ್ಷಾಕು ವಂಶಕ್ಕೆ ಸೇರಿದವರು ಎಂದು ಸ್ವಯಂ ಘೋಷಿಸಿಕೊಂಡಿರುವ ಸಂಘಟನೆ ಈ ಆಕ್ರಮನ ನಡೆಸಿದೆ ಎಂದು ಮಂದಿರದ ಪ್ರಮುಖರು ತಿಳಿಸಿದ್ದಾರೆ.
ಸಶಸ್ತ್ರ ಗುಂಪನ್ನು ರಚಿಸಿ ರಾಮ ರಾಜ್ಯವನ್ನು ಸ್ಥಾಪಿಸುವುದಕ್ಕೆ ಪ್ರಯತ್ನಿಸುತ್ತಿರುವ ಗುಂಪು ಇದಾಗಿದೆ ಮತ್ತು ಇವರ ಈ ಪ್ರಯತ್ನವನ್ನು ವಿರೋಧಿಸುತ್ತಿರುವವರನ್ನು ಹಿಂಸಾತ್ಮಕ ರೂಪದಲ್ಲಿ ಮಣಿಸುವುದು ಇವರ ಕಾರ್ಯತಂತ್ರವಾಗಿದೆ ಎಂದು ಮಂದಿರದ ಮುಖ್ಯಸ್ಥರು ತಿಳಿಸಿದ್ದಾರೆ.
ಈ ಸಂಘಟನೆಗೆ ಜನರನ್ನು ರಿಕ್ರೂಟ್ ಮಾಡುವುದಕ್ಕೆ ಮತ್ತು ಫಂಡ್ ಸಂಗ್ರಹಿಸುವುದಕ್ಕೆ ನೆರವಾಗಬೇಕು ಎಂದು ಈ ಪುರೋಹಿತರ ಜೊತೆ ಈ ರಾಮರಾಜ್ಯಂ ತಂಡ ವಿನಂತಿಸಿತ್ತು. ಇದಕ್ಕೆ ಒಪ್ಪಿಕೊಳ್ಳದಿದ್ದುದೇ ಈ ದಾಳಿಗೆ ಕಾರಣ ಎಂದು ಅವರು ಹೇಳಿದ್ದಾರೆ. ಇದೀಗ ಈ ಸಂಘಟನೆಯ ಮುಖ್ಯ ರೂವಾರಿ ವೀರ ರಾಘವ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj