ಬ್ರಿಕ್ಸ್ ಸಭೆ ಹಿನ್ನೆಲೆ: ದಕ್ಷಿಣ ಆಫ್ರಿಕಾದಲ್ಲಿ ಪ್ರಧಾನಿ ಮೋದಿಗೆ ಅದ್ದೂರಿ ಸುಸ್ವಾಗತ - Mahanayaka
6:00 AM Saturday 21 - September 2024

ಬ್ರಿಕ್ಸ್ ಸಭೆ ಹಿನ್ನೆಲೆ: ದಕ್ಷಿಣ ಆಫ್ರಿಕಾದಲ್ಲಿ ಪ್ರಧಾನಿ ಮೋದಿಗೆ ಅದ್ದೂರಿ ಸುಸ್ವಾಗತ

22/08/2023

ಬ್ರಿಕ್ಸ್ ಸಭೆಯಲ್ಲಿ ಭಾಗವಹಿಸಲು ದಕ್ಷಿಣ ಆಫ್ರಿಕಾಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಆಫ್ರಿಕನ್ ಡ್ಯಾನ್ಸರ್ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿದಾಗ ಭಾರತೀಯ ಶೈಲಿಯ ಡ್ರಮ್ಸ್ ಮತ್ತು ವಾದ್ಯಗಳನ್ನು ಇದೇ ವೇಳೆ ನುಡಿಸಲಾಯಿತು. ಕೆಲವು ನಿಮಿಷಗಳ ಕಾಲ ಅಲ್ಲಿ ನಿಂತ ಮೋದಿ ಅವರು ಆಫ್ರಿಕನ್ ನೃತ್ಯವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಅನೇಕ ಸಾಧುಗಳು ಕೂಡಾ ಉಪಸ್ಥಿತರಿದ್ದರು.

ಇದೇ ವೇಳೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಾರತೀಯ ಸಮುದಾಯದ ಜನರನ್ನು ಪ್ರಧಾನಿ ಮೋದಿ ಭೇಟಿ ಮಾಡಿದರು. ಅವರಲ್ಲಿ ಕೆಲವು ಮಕ್ಕಳಿದ್ದರು. ಅಲ್ಲಿದ್ದ ಭಾರತೀಯ ಸಮುದಾಯದ ಮಹಿಳೆಯರು ಪ್ರಧಾನಿ ಮೋದಿಗೆ ರಾಖಿ ಕಟ್ಟಿದರು.

ವುಮಾನ ನಿಲ್ದಾಣಕ್ಕೆ ಆಗಮಿಸಿದ ಭಾರತೀಯ ಅನಿವಾಸಿಗಳು ಮೋದಿ ಅವರನ್ನು ಕಂಡೊಡನೆ ‘ಭಾರತ್ ಮಾತಾ ಕೀ ಜೈ, ವಂದೇ ಮಾತರಂ’ ಎಂಬ ಘೋಷಣೆಗಳನ್ನು ಕೂಗಿದರು. ದಕ್ಷಿಣ ಆಫ್ರಿಕಾ ಗಣರಾಜ್ಯದ ಉಪಾಧ್ಯಕ್ಷ ಪಾಲ್ ಶಿಪೋಕೋಸಾ ಮಶಾತಿಲೆ ಅವರು ಮೋದಿಯವರನ್ನು ಔಪಚಾರಿಕವಾಗಿ ಸ್ವಾಗತಿಸಿದ್ದಾರೆ.


Provided by

ಏರ್ ಪೋರ್ಟ್ ನಲ್ಲಿ ಮಾತ್ರವಲ್ಲದೇ ಜೋಹಾನ್ಸ್‌ಬರ್ಗ್‌ನ ಸ್ಯಾಂಡ್‌ಟನ್ ಸನ್ ಹೋಟೆಲ್‌ನ ಹೊರಗಡೆಯೂ ಭಾರತೀಯರು ನರೇಂದ್ರ ಮೋದಿಯವರನ್ನು ಡ್ರಮ್ಸ್ ಮತ್ತು ಕೆಲವು ಸಂಗೀತ ವಾದ್ಯಗಳೊಂದಿಗೆ ಸ್ವಾಗತಿಸಿದರು. ಸ್ವಾಮೀಜಿಗಳು, ಜೈನ ಮುನಿಗಳು ಸೇರಿದಂತೆ ಹಲವರು ದೇವರ ಗೀತೆಗಳನ್ನು ಹಾಡಿ ಸ್ವಾಗತಿಸಿದ್ದಾರೆ.

15ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ (ಆಗಸ್ಟ್ 22) ಸಂಜೆ 5.15ಕ್ಕೆ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್​​ಗೆ ಬಂದಿಳಿದರು. ಆಗ ಈ ಸಂದರ್ಭದಲ್ಲಿ ಅವರನ್ನು ವಿಮಾನ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಅಧ್ಯಕ್ಷ ಸಿರಿಲ್ ರಮಾಫೋಸಾ ಅವರ ಆಹ್ವಾನದ ಮೇರೆಗೆ ಇಲ್ಲಿಗೆ ಬಂದಿರುವ ಪ್ರಧಾನಿ ಮೋದಿ ಅವರು ಆಗಸ್ಟ್ 22 ರಿಂದ 24 ರವರೆಗೆ ಇರಲಿದ್ದಾರೆ. ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಭಾರತೀಯ ಸಮುದಾಯದ ಹೆಚ್ಚಿನ ಸಂಖ್ಯೆಯ ಜನರು ವಿಮಾನ ನಿಲ್ದಾಣವನ್ನು ತಲುಪಿದರು. ಈ ಸಂದರ್ಭದಲ್ಲಿ ಮೋದಿ ಅವರು ಜನರಿಗೆ ಹಸ್ತಲಾಘವ ಸಲ್ಲಿಸಿದರು.

ದಕ್ಷಿಣ ಆಫ್ರಿಕಾದ ನಂತರ ಪ್ರಧಾನಮಂತ್ರಿ ಮೋದಿ ಆಗಸ್ಟ್ 25 ರಂದು ಅಥೆನ್ಸ್ ಗೆ ತಮ್ಮ ಗ್ರೀಕ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೊಟಾಕಿಸ್ ಅವರ ಆಹ್ವಾನದ ಮೇರೆಗೆ ಭೇಟಿ ನೀಡಲಿದ್ದಾರೆ. ಈ ಮೂಲಕ ಕಳೆದ 40 ವರ್ಷಗಳಲ್ಲಿ ಗ್ರೀಸ್‌ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ ನರೇಂದ್ರ ಮೋದಿ.

ಇತ್ತೀಚಿನ ಸುದ್ದಿ