ಸಿದ್ದರಾಮಯ್ಯರನ್ನು ಕಂಡರೆ ಪ್ರಧಾನಿ ಮೋದಿಗೆ ಭಯ: ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ
ಚಾಮರಾಜನಗರ: ಸಿದ್ದರಾಮಯ್ಯ ಅವರನ್ನು ಕಂಡರೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಯ ಎಂದು ಕಾಂಗ್ರೆಸ್ ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ಚಾಮರಾಜನಗರದಲ್ಲಿ ಅವರು ಮಾತನಾಡಿ, ಕೇಂದ್ರದಲ್ಲಿ ಮಾಡುವ ಕೆಲಸ ಅಷ್ಟಿದೆ, ಆದರೆ ಸಿದ್ದರಾಮಯ್ಯ ಅವರಿಂದಾಗಿ ಮೋದಿ ರಾಜ್ಯಕ್ಕೆ ಓಡೋಡಿ ಬರ್ತಿದ್ದಾರೆ. ನೇರವಾಗಿ, ತೀಕ್ಷ್ಣವಾಗಿ ಬಿಜಿಪಿ ವಿರುದ್ಧ ಮಾತನಾಡುವುದರಿಂದ ಸಿದ್ದು ಕಂಡರೇ ಬಿಜೆಪಿ ಅವರಿಗೆ ನಡುಕ, ರಾತ್ರಿನೂ ಸಿದ್ದರಾಮಯ್ಯ ಅವರ ಕನಸು ಎದ್ದಾಗಲೂ ಸಿದ್ದರಾಮಯ್ಯ ಅವರ ಕನಸು ಕಾಣ್ತಾರೆ ಎಂದು ವ್ಯಂಗ್ಯ ಮಾಡಿದರು.
ಸಿದ್ದರಾಮಯ್ಯ ಒಂದು ಕ್ಷೇತ್ರ ಇಲ್ಲವೇ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವುದು ಅವರಿಗೇ ಬಿಟ್ಟ ವಿಚಾರ. ಆದರೆ, ಸಿದ್ದರಾಮಯ್ಯ ಅವರು ಎಲ್ಲಿ ಸ್ಪರ್ಧಿಸಿದರೂ ಗೆದ್ದೆ ಗೆಲ್ತಾರೆ, ಬಾದಾಮಿ ಜನರಂತೂ ಅಲ್ಲೇ ನಿಲ್ಲಬೇಕೆಂದು ಬೆನ್ನತ್ತಿದ್ದಾರೆ ಎಂದು ಸಿದ್ದರಾಮಯ್ಯ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ತಮ್ಮ ಭರವಸೆಗಳನ್ನು ಸುಳ್ಳೆಂದು ಜರಿಯುತ್ತಿರುವ ಬಿಜೆಪಿಗರ ಟೀಕೆಗೆ ಪ್ರತಿಕ್ರಿಯಿಸಿ, ಬಿಜೆಪಿ ಹುಟ್ಟುಗುಣವೇ ಸುಳ್ಳು, ನಾವು ಕೊಟ್ಟಿದ್ದ 165 ಭರವಸೆಗಳನ್ನಷ್ಟೂ ಈಡೇರಿಸಿದ್ದೇವೆ, ಅವರ ಯೋಗ್ಯತೆಗೆ 20-30 ಈಡೇರಿಸಿದ್ದಾರೆ, ಸಿದ್ದರಾಮಯ್ಯ ಕೊಟ್ಟ ಭಾಗ್ಯಗಳನ್ನು ಅವರು ಉಳಿಸಿಕೊಳ್ಳಲಾಗಲಿಲ್ಲ ಎಂದು ಬಿಜೆಪಿ ಟೀಕೆಗೆ ಕಿಡಿಕಾರಿದರು.
ಸಿಎಂ ಬೊಮ್ಮಾಯಿಗೆ ಸವಾಲ್: ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಅಸಮಾಧಾನ ಹೊರಹಾಕಿ, ನಾನು ಸಚಿವನಾಗಿದ್ದ ವೇಳೆ ನನ್ನ ಕಚೇರಿಯಲ್ಲಿ ಹಣ ಸಿಕ್ಕಿತು ಎಂದು ಸಿಎಂ ಹೇಳಿದ್ದು ಅವರೇನಾದರೂ ಬಂದು ನೋಡಿದ್ದರೇ..? ಸ್ಥಾನದ ಘನತೆ ಅರಿತು ಮಾತನಾಡಬೇಕು, ದಾಖಲಾತಿ ತರಿಸಿಕೊಂಡು ಹಣ ಸಿಕ್ಕಿತೆಂದು ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw