80 ವಿದ್ಯಾರ್ಥಿನಿಯರ ಶರ್ಟ್ ಬಿಚ್ಚಿಸಿ ಮನೆಗೆ ಕಳುಹಿಸಿದ ಪ್ರಾಂಶುಪಾಲ: ವಿಕೃತಿಗೆ ಬೆಚ್ಚಿಬಿದ್ದ ಪೋಷಕರು

Jharkhand
12/01/2025

ರಾಂಚಿ:  ಪ್ರಾಂಶುಪಾಲನೊಬ್ಬ ವಿದ್ಯಾರ್ಥಿನಿಯರ ಶರ್ಟ್ ಬಿಚ್ಚಿಸಿ ಬ್ಲೇಸರ್ ನಲ್ಲೇ ಮನೆಗೆ ಕಳುಹಿಸಿದ ಅಮಾನವೀಯ ಘಟನೆ ಜಾರ್ಖಂಡ್ ನ ಧನ್ ಬಾದ್ ನ ಪ್ರತಿಷ್ಠಿತ ಶಾಲೆಯೊಂದರಲ್ಲಿ ನಡೆದಿದ್ದು, ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ.

ಪೆನ್ ಡೆ ಆಚರಿಸಿಕೊಂಡಿದ್ದ ವಿದ್ಯಾರ್ಥಿನಿಯರು ತಮ್ಮ ಶರ್ಟ್ ಮೇಲೆ ಪೆನ್ನಿನಿಂದ ಬರೆದುಕೊಂಡಿದ್ದರು. ಆದರೆ ವಿಕೃತಿ ಮನಸ್ಸಿನ ಪ್ರಾಂಶುಪಾಲ ಇದನ್ನೇ ನೆಪವಾಗಿಟ್ಟುಕೊಂಡು, ವಿದ್ಯಾರ್ಥಿನಿಯರ ಶರ್ಟ್ ಬಿಚ್ಚಿಸಿ, ಬ್ಲೇಸರ್ ನಲ್ಲಿಯೇ ಮನೆಗೆ ಕಳುಹಿಸಿ ಅಹಂಕಾರ ಮೆರೆದಿದ್ದಾನೆ.

ಪ್ರಾಂಶುಪಾಲನ ಈ ವರ್ತನೆಗೆ ಪೋಷಕರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ಮಾಧವಿ ಮಿಶ್ರಾ, ಪ್ರಾಂಶುಪಾಲನ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಸುಮಾರು 80 ವಿದ್ಯಾರ್ಥಿನಿಯರನ್ನು ಶರ್ಟ್ ಬಿಚ್ಚಿಸಿ ಮನೆಗೆ ಕಳುಹಿಸಲಾಗಿದೆ. ಇಂತಹ ವಿಕೃತ ಮನಸ್ಸಿನವರನ್ನು ಪ್ರಾಂಶುಪಾಲರಾಗಿ ಆಯ್ಕೆ ಮಾಡಿದ್ದೀರಾ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಕೊಡಬೇಕಾದ ವಿದ್ಯಾಸಂಸ್ಥೆಗಳು ತಾವೇ ಚಿತ್ರ ವಿಚಿತ್ರ ಶಿಕ್ಷೆಗಳನ್ನು ಕಂಡು ಹಿಡಿಯುತ್ತಾರೆ, ಇದರಿಂದ ಪೋಷಕರು ಆತಂಕಕ್ಕೊಳಗಾಗಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/Ci8F6ckDmAbCBQyqgLqOPx

ಇತ್ತೀಚಿನ ಸುದ್ದಿ

Exit mobile version