ಉಚಿತ ಪ್ರಯಾಣದಿಂದ ಖಾಸಗಿ ಬಸ್ ಗಳಿಗೆ ಸಂಕಷ್ಟ: ಖಾಲಿ ಓಡುತ್ತಿರುವ ಖಾಸಗಿ ಬಸ್! - Mahanayaka
5:03 PM Friday 20 - September 2024

ಉಚಿತ ಪ್ರಯಾಣದಿಂದ ಖಾಸಗಿ ಬಸ್ ಗಳಿಗೆ ಸಂಕಷ್ಟ: ಖಾಲಿ ಓಡುತ್ತಿರುವ ಖಾಸಗಿ ಬಸ್!

bus
13/06/2023

ಚಾಮರಾಜನಗರ: ಕರ್ನಾಟಕ ಸರ್ಕಾರದ ಶಕ್ತಿ ಯೋಜನೆ ಜನರಿಗೆ ಸಂತಸ ಮೂಡಿಸಿದ್ದರೇ ಖಾಸಗಿ ಬಸ್ ಗಳಿಗೆ ಸಂಕಷ್ಟ ತಂದಿಟ್ಟಿದೆ. ಚಾಮರಾಜನಗರ ಜಿಲ್ಲಾಕೇಂದ್ರದಿಂದ 70–80 ಖಾಸಗಿ ಬಸ್ ಗಳು ನಿತ್ಯ ಸಂಚರಿಸಲಿದ್ದು ಇಂದು ಎಲ್ಲಾ ಬಸ್ ಗಳು ಆರ್ಥಿಕ ಪೆಟ್ಟು ತಂದಿದೆ. ಖಾಸಗಿ ಬಸ್ ಗಳತ್ತ ಜನರು ಬಾರದಿದ್ದರಿಂದ ಬಸ್ ನಿಲ್ದಾಣವೇ ಬಿಕೋ ಎನ್ನುತ್ತಿತ್ತು.

ಟಂಟಂ, ಖಾಸಗಿ ಬಸ್ ಗಳನ್ನು ಆಶ್ರಯಿಸಿದ್ದ ಜನರು ಉಚಿತ ಪ್ರಯಾಣದಿಂದಾಗಿ ಎಲ್ಲರೂ KSRTC ಬಸ್ ಗಳತ್ತ ಮುಖ ಮಾಡಿದ್ದು ಖಾಸಗಿ ಬಸ್ ಮಾಲೀಕರು, ಏಜೆಂಟ್ ಗಳು ಸಂಕಷ್ಟಕ್ಕೆ ಎದುರಾಗಿದ್ದಾರೆ. ಟ್ರಪ್ಪಿಗೆ 1800-2000 ರೂ. ಸಂಪಾದಿಸುತ್ತಿದ್ದ ಗ್ರಾಮಾಂತರ ಖಾಸಗಿ ಬಸ್ ಗಳು ದಿಢೀರನೇ 500-600 ರೂ.ಆದಾಯ ಇಳಿದಿದೆ. ಸರ್ಕಾರಿ ಬಸ್ ಗಳು ಸೌಲಭ್ಯ ಇಲ್ಲದ ಕಡೆಗೆ ಮಾತ್ರ ಜನರು ಖಾಸಗಿ ಬಸ್ ನ್ನು ಆಶ್ರಯಿಸುತ್ತಿದ್ದಾರೆ.

ಖಾಸಗಿ ಬಸ್ ಏಜೆಂಟ್ ರಾಘವೇಂದ್ರ ಮಾತನಾಡಿ, ಶಕ್ತಿ ಯೋಜನೆಯಿಂದ ಚಾಮರಾಜನಗರದ ಖಾಸಗಿ ಬಸ್​ ಪುರ್ತಿ ಖಾಲಿಯಾಗಿ ಓಡುತ್ತಿದೆ. ಸೋಮವಾರವಾದ ಇಂದು ಜನ ಕಿಕ್ಕಿರುದು ತುಂಬಬೇಕಿತ್ತು. ಆದರೆ ಇಂದು ಬಸ್​ಗಳು ಕಡಿಮೆಯಾಗಿವೆ ಮತ್ತು ಪ್ರಯಾಣಿಕರು ಕಡಿಮೆಯಾಗಿದ್ದಾರೆ. ಖಾಸಗಿ ಬಸ್​ಗಳಲ್ಲಿ ಮಹಿಳಾ ಪ್ರಯಾಕರು ತುಂಬಾ ಕಡಿಮೆಯಾಗಿದ್ದಾರೆ. ಎಲ್ಲಿ ಸರ್ಕಾರಿ ಬಸ್​ಗಳಿವೋ ಅಲ್ಲಿ ಖಾಸಗಿ ಬಸ್​ಗಳು ಓಡುತ್ತಿವೆ ಎಂದರು.


Provided by

ಮುಖ್ಯವಾದ ಊರುಗಳಾದ ನಂಜನಗೂಡು, ಮೈಸೂರು, ನರಸೀಪುರ, ಗುಂಡ್ಲುಪೇಟೆ, ಕೊಳ್ಳೆಗಾಲಕ್ಕಾಗಲಿ ಪ್ರಯಾಣಿಕರು ಖಾಸಗಿ ಬಸ್​ನಲ್ಲಿ ಸಂಚರಿಸಲು ಆಗಮಿಸುತ್ತಿಲ್ಲ. ಮಹಿಳೆಯರಿಂದ ಖಾಸಗಿ ಬಸ್​ನಲ್ಲಿ ಪ್ರಯಾಣಿಸುವ​ ಪುರುಷರ ಸಂಖ್ಯೆಯೂ ಕಡಿಮೆಯಾಗಿದೆ. ಬಸ್​ ಖಾಲಿ ಓಡಾಡುತ್ತಿರುವುದರಿಂದ ನಮ್ಮ ಜೀವನಕ್ಕೆ ಕಷ್ಟ ಆಗುತ್ತುದೆ ಎಂದು ಅಳಲು ತೊಡಿಕೊಂಡರು.

ಖಾಸಗಿ ಬಸ್ ಚಾಲಕ ಪರಶಿವಮೂರ್ತಿ ಮಾತನಾಡಿ, ಶಕ್ತಿ ಯೋಜನೆಯಿಂದ ನಮ್ಮ ಕುಟುಂಬ ಬೀದಿಗೆ ಬರುವಷ್ಟು ತೊಂದರೆಯಾಗಿದೆ. ಸಿದ್ದರಾಮಯ್ಯ ನಮ್ಮ ಮೇಲೆ ಭಾರ ಎರೆದಿದ್ದಾರೆ. ಖಾಸಗಿ ಬಸ್​ನವರು ನೇಣು ಹಾಕಿಕೊಳ್ಳುವ ಪರಿಸ್ಥಿತಿ ಬಂದಿದೆ. ಮಹಿಳೆಯ ಯಾರು ಖಾಸಗಿ ಬಸ್​ ಹತ್ತುತ್ತಿಲ್ಲ ಎಂದರು. ಖಾಸಗಿ ಬಸ್ ಕ್ಲೀನರ್ ಮಹಾದೇವಪ್ಪ ಮಾತನಾಡಿ, ಶಕ್ತಿ ಯೋಜನೆಯಿಂದ ಖಾಸಗಿ ಬಸ್​ನವರಿಗೆ ಸಮಸ್ಯೆಯಾಗುತ್ತಿದೆ. ಖಾಸಗಿ ಬಸ್​ಗಳಿಗೆ ತುಂಬ ನಷ್ಟವಾಗುತ್ತಿದೆ ಎಂದು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ