ಕೇಂದ್ರ ಸರಕಾರದ ಅಕ್ಕಿ ಖರೀದಿಗೆ ಆಸಕ್ತಿ ತೋರದ ಖಾಸಗಿ ಉದ್ಯಮ..! - Mahanayaka
3:16 AM Friday 20 - September 2024

ಕೇಂದ್ರ ಸರಕಾರದ ಅಕ್ಕಿ ಖರೀದಿಗೆ ಆಸಕ್ತಿ ತೋರದ ಖಾಸಗಿ ಉದ್ಯಮ..!

11/07/2023

ಇತ್ತೀಚೆಗೆ ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅಕ್ಕಿ ನೀಡಲು ನಿರಾಕರಿಸಿತ್ತು. ಇದೇ ಅಕ್ಕಿಯನ್ನು ಖಾಸಗಿಯವರಿಗೆ ಮಾರಾಟ ಮಾಡಲು ಆದೇಶ ನೀಡಿತ್ತು. ಆದರೆ ಕೇಂದ್ರ ಸರಕಾರದ ಅಕ್ಕಿ ಖರೀದಿಗೆ ಖಾಸಗಿಯವರು ಆಸಕ್ತಿ ತೋರಿಲ್ಲ. ಹರಾಜಿಗಿಟ್ಟದ್ದ 3.86 ಲಕ್ಷ ಮೆಟ್ರಿಕ್ ಟನ್ ಅಕ್ಕಿಯಲ್ಲಿ ಮಾರಾಟವಾಗಿದ್ದು ಕೇವಲ 170 ಮೆಟ್ರಿಕ್ ಟನ್ ಅಕ್ಕಿ ಮಾತ್ರ.
ರಾಜ್ಯಗಳಿಗೆ ಅಕ್ಕಿ ಮಾರಾಟ ಮಾಡ್ಬಾರ್ದು ಅಂತ ಕೇಂದ್ರ ಸರ್ಕಾರ ಎಫ್‌ಸಿಐಗೆ ಆದೇಶ ನೀಡಿತ್ತು. ಜೊತೆಗೆ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗ್ತಿರೋದನ್ನ ನಿಯಂತ್ರಿಸಲು ಅಕ್ಕಿ ಮತ್ತು ಗೋಧಿ ಧಾನ್ಯಗಳನ್ನು ಇ-ಹರಾಜು ಮಾಡಲು ಎಫ್‌ಸಿಐಗೆ ಕೇಂದ್ರ ಸೂಚಿಸಿತ್ತು. ಆದರೆ ಕಳೆದ ವಾರ ಎಫ್‌ಸಿಐ 3.86
ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಹರಾಜಿಗಿಟ್ಟರೂ ಸಹ ಕೇವಲ 170 ಮೆಟ್ರಿಕ್ ಟನ್ ಅಕ್ಕಿ ಮಾತ್ರ ಹರಾಜಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜ್ಯ ಸರ್ಕಾರಗಳು ಈ ಬಿಡ್‌ನಲ್ಲಿ ಭಾಗವಹಿಸುವಂತಿಲ್ಲ. ಆದ್ರೆ ಖಾಸಗಿ ಉದ್ಯಮಗಳು ಮಾತ್ರ ಈ ಹರಾಜಿನಲ್ಲಿ ಭಾಗವಹಿಸೋಕೆ ಅವಕಾಶ ನೀಡಲಾಗಿದೆ. ಈ ಕಾರಣದಿಂದ ಎಫ್‌ಸಿಐಗೆ ಈಗ ಸಂಕಷ್ಟ ಎದುರಾಗಿದೆ. ಜುಲೈ ಐದರಂದು ನಡೆದ ಎಫ್‌ಸಿಐನ ಇ-ಹರಾಜಿನಲ್ಲಿ 19 ರಾಜ್ಯಗಳು ಹಾಗೂ ಈಶಾನ್ಯ ರಾಜ್ಯಗಳ ಒಕ್ಕೂಟ ಪ್ರದೇಶಕ್ಕೆ ಒಟ್ಟು 3.86 ಲಕ್ಷ ಟನ್ ಅಕ್ಕಿ ಮಾರಲು ಯೋಜನೆ ಮಾಡಲಾಗಿತ್ತು. 16 ರಾಜ್ಯಗಳಿಂದ ಬಿಡ್ಡಿಂಗ್ ಬಂದಿಲ್ಲ ಎಂದು ಇಲಾಖೆಯ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ.

 

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw


Provided by

ಇತ್ತೀಚಿನ ಸುದ್ದಿ