ಪ್ರಿಯಕರನ ಸಾವಿನಿಂದ ನೊಂದು ನೇಣಿಗೆ ಶರಣಾದ ಯುವತಿ!
ಕಲಬುರ್ಗಿ: ಪ್ರಿಯಕರನ ಸಾವಿನಿಂದ ನೊಂದ ಯುವತಿಯೋರ್ವಳು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ನಗರದ ಕ್ವಾಟರ್ಸ್ ನಲ್ಲಿ ನಡೆದಿದ್ದು, ಪ್ರಿಯಕರನ ಸಾವಿನ ಬೆನ್ನಲ್ಲೇ ಯುವತಿಗೆ ಬೇರೆ ಮದುವೆ ನಿಶ್ಚಿಯಿಸಿದ ಹಿನ್ನೆಲೆಯಲ್ಲಿ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ.
18 ವರ್ಷ ವಯಸ್ಸಿನ ಶೃತಿ ಆತ್ಮಹತ್ಯೆಗೆ ಶರಣಾದ ಯುವತಿಯಾಗಿದ್ದು, ಈಕೆ ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದಳು ಎನ್ನಲಾಗಿದೆ. ಒಂದು ತಿಂಗಳ ಹಿಂದೆ ಈಕೆಯ ಪ್ರಿಯಕರ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದ ಎನ್ನಲಾಗಿದೆ.
ಪ್ರಿಯಕರನ ಸಾವಿನಿಂದ ಯುವತಿ ತೀವ್ರವಾಗಿ ನೊಂದಿದ್ದಳು. ಕೆಲವು ದಿನಗಳ ಕಾಲ ಆಹಾರ ಕೂಡ ತ್ಯಜಿಸಿದ್ದಳು ಎನ್ನಲಾಗಿದೆ. ಇನ್ನೂ ಮಗಳ ಹಳೆಯ ನೆನಪು ಮರೆಸಲು ಮನೆಯವರು ಸಂಬಂಧಿಕ ಯುವಕನೋರ್ವನೊಂದಿಗೆ ಮದುವೆ ಮಾಡಲು ನಿಶ್ಚಿಯಿಸಿದ್ದರು ಎನ್ನಲಾಗಿದೆ. ಇದರಿಂದ ತೀವ್ರವಾಗಿ ಯುವತ ಆಕ್ರೋಶಗೊಂಡಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ವರದಿಯಾಗಿದೆ. ಘಟನೆ ಸಂಬಂಧ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಉಪ್ಪಿನಂಗಡಿ ಘಟನೆ ಖಂಡಿಸಿ ಮಂಗಳೂರಿನಲ್ಲಿ ಪಿಎಫ್ ಐ ಬೃಹತ್ ಪ್ರತಿಭಟನೆ
ಸಿದ್ದರಾಮಯ್ಯ, ಸಿಎಂ ಇಬ್ರಾಹಿಂ ಬೈದಾಡಿಕೊಳ್ಳುತ್ತಿರುವ ವಿಡಿಯೋ ಬಗ್ಗೆ ಸಿಎಂ ಇಬ್ರಾಹಿಂ ಹೇಳಿದ್ದೇನು ಗೊತ್ತಾ?
ಅತ್ಯಾಚಾರದ ಬಗ್ಗೆ ವ್ಯಂಗ್ಯ: ಸ್ಪೀಕರ್ ಕಾಗೇರಿ ಕ್ಷಮೆ ಕೇಳುವುದಿಲ್ಲವೇ? ಎಂಬ ಪ್ರಶ್ನೆಗೆ ನಿರುತ್ತರವಾದ ಯಡಿಯೂರಪ್ಪ
“ರೇಪ್ ತಡೆಯಲು ಆಗದಿದ್ದರೆ, ಮಲಗಿ ಎಂಜಾಯ್ ಮಾಡಬೇಕು” | ತನ್ನ ವಿವಾದಾತ್ಮಕ ಹೇಳಿಕೆಗೆ ಕ್ಷಮೆ ಕೇಳಿದ ರಮೇಶ್ ಕುಮಾರ್
ಮಗುವನ್ನು ಬಕೆಟ್ ನಲ್ಲಿ ಮುಳುಗಿಸಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಮಹಿಳೆ!
ಕುಟುಂಬ ರಾಜಕಾರಣ: ವಿಧಾನ ಪರಿಷತ್ ತುಂಬ ರಾಜಕಾರಣಿಗಳ ಕರುಳ ಕುಡಿಗಳು
ಉಪ್ಪಿನಂಗಡಿ ಪೊಲೀಸರ ಕಟ್ಟುಕಥೆಗಳು: ಲಾಠಿಚಾರ್ಜ್ ಪ್ರಮಾದ ಮುಚ್ಚಿ ಹಾಕುವ ಪಿತೂರಿ: ಪಾಪ್ಯುಲರ್ ಫ್ರಂಟ್ ಆರೋಪ