ಪ್ರೀತಿಗೆ ದ್ರೋಹ ಬಗೆದ ಪತ್ನಿ, ಸ್ನೇಹಕ್ಕೆ ದ್ರೋಹ ಬಗೆದ ಸ್ನೇಹಿತ | ತಂದೆಯ ಹತ್ಯೆಯಿಂದ ಅನಾಥಳಾದ ಮಗಳು!

ಬೆಂಗಳೂರು: ಪ್ರಿಯಕರನೊಂದಿಗೆ ಸೇರಿ ತನ್ನ ಪತಿಯನ್ನೇ ಮಹಿಳೆಯೋರ್ವಳು ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದ್ದು, ಪತಿಯ ಸ್ನೇಹಿತನೊಂದಿಗೆಯೇ ಪ್ರೀತಿಯಲ್ಲಿ ಬಿದ್ದ ಮಹಿಳೆ ಇದೀಗ ಆತನೊಂದಿಗೆ ಸೇರಿ ತನ್ನ ಗಂಡನನ್ನು ಮುಗಿಸಿದ್ದಾಳೆ.
ಮಂಡ್ಯ ಜಿಲ್ಲೆಯ ಕಿಲಾರದ ಕಾರ್ತಿಕ್ ಹತ್ಯೆಗೀಡಾದ ವ್ಯಕ್ತಿಯಾಗಿದ್ದಾನೆ. 5 ವರ್ಷಗಳ ಹಿಂದೆ ಈತ ರಂಜಿತಾ ಎಂಬಾಕೆಯನ್ನು ಪ್ರೀತಿಸಿ ವಿವಾಹವಾಗಿದ್ದ ಎಂದ ಹೇಳಲಾಗಿದೆ. ವಿವಾಹದ ಬಳಿಕ ಇವರಿಗೆ ನಾಲ್ಕು ವರ್ಷ ವಯಸ್ಸಿನ ಹೆಣ್ಣು ಮಗು ಕೂಡ ಇದ್ದಾಳೆ. ಬೆಂಗಳೂರಿನ ಚಾಮರಾಜಪೇಟೆಯ ತಮ್ಮ ಸ್ನೇಹಿತ ಸಂಜೀವ್ ಎಂಬಾತನ ಮನೆಯಲ್ಲಿ ಇವರಿಬ್ಬರು ವಾಸಿಸುತ್ತಿದ್ದರು.
ಸಂಜೀವ್ ಮತ್ತು ಕಾರ್ತಿಕ್ ಇಬ್ಬರು ಕೂಡ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ದಿನಗಳು ಕಳೆದಂತೆಯೇ ಸಂಜೀವ್ ಮತ್ತು ಕಾರ್ತಿಕ್ ನ ಪತ್ನಿ ರಂಜಿತಾ ಪರಸ್ಪರ ಹತ್ತಿರವಾಗಿದ್ದು, ಸಲುಗೆ ಬೆಳೆದಿದೆ ಎನ್ನಲಾಗಿದೆ. ತನ್ನ ಗೆಳೆಯನಿಗೇ ವಂಚನೆ ಮಾಡಿದ ಸಂಜೀವ್, ಆತನ ಪತ್ನಿಯ ಜೊತೆಗೆ ಅಕ್ರಮವಾಗಿ ಸಂಬಂಧ ಮುಂದುವರಿಸಿದ್ದಾನೆ ಎಂದು ಹೇಳಲಾಗಿದೆ.
ಸಂಜೀವ ತನ್ನ ಮೊದಲನೆಯ ಪತ್ನಿಗೆ ವಿಚ್ಛೇದನ ನೀಡಿ ಒಬ್ಬಂಟಿಯಾಗಿದ್ದ, ಇತ್ತ ಪ್ರೀತಿಸಿ ಮದುವೆಯಾಗಿದ್ದರೂ ಕಾರ್ತಿಕ್, ರಂಜಿತಾಳಿಗೆ ಬೇಡವಾಗಿತ್ತು. ಹೀಗಾಗಿಯೇ ತಮ್ಮ ನಡುವಿನ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಕಾರ್ತಿಕ್ ನನ್ನು ಮುಗಿಸಲು ಇವರಿಬ್ಬರು ಸೇರಿ ಸ್ಕೆಚ್ ಹಾಕಿದ್ದಾರೆ.
ಜುಲೈ 29ರಂದು ಕಾರ್ತಿಕ್ ಗೆ ಕಂಠಮಟ್ಟ ಮದ್ಯ ಕುಡಿಸಿ, ಸ್ನೇಹಿತ ಸುಬ್ರಮಣಿಯೊಂದಿಗೆ ಚನ್ನಪಟ್ಟಣಕ್ಕೆ ಕರೆದುಕೊಂಡು ಹೋಗಿದ್ದ ಸಂಜೀವ, ಕಾರ್ತಿಕ್ ನ ಕುತ್ತಿಗೆ ಬಿಗಿದು, ತಲೆಗೆ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ಆತನ ಮೃತದೇಹವನ್ನು ಚೀಲದಲ್ಲಿ ತುಂಬಿಸಿ ಬೆಂಗಳೂರಿನ ಕುಂಬಳಗೋಡು ವೃಷಭಾವತಿ ನದಿಗೆ ಎಸೆದು ಅಲ್ಲಿಂದ ಪರಾರಿಯಾಗಿದ್ದ.
ಇದಾದ ಬಳಿಕ ಕಾರ್ತಿಕ್ ನ ಸಾವನ್ನು ಅಂತಿಮವಾಗಿ ನಾಪತ್ತೆ ಎಂದು ಬಿಂಬಿಸಬೇಕು ಎನ್ನುವ ಪ್ರಯತ್ನದ ಭಾಗವಾಗಿ ಆಗಸ್ಟ್ 1ರಂದು ಕೆಂಪೇಗೌಡ ನಗರ ಠಾಣೆಗೆ ದೂರು ನೀಡಲು ರಂಜಿತಾ ಆಗಮಿಸಿದ್ದು, ಆಕೆಯ ಜೊತೆಗೆ ಸಂಜೀವ ಕೂಡ ಬಂದಿದ್ದಾನೆ. ಇದರಿಂದಾಗಿ ಸಂಜೀವನ ಮೇಲೆ ಪೊಲೀಸರಿಗೆ ಅನುಮಾನ ಬಂದಿದೆ. ತಕ್ಷಣ ಆತನನ್ನು ತಮ್ಮ ಶೈಲಿಯಲ್ಲಿ ಪೊಲೀಸರು ವಿಚಾರಿಸಿದಾಗ ಆತ ಕೊಲೆಯ ರಹಸ್ಯವನ್ನು ಬಾಯ್ಬಿಟ್ಟಿದ್ದಾನೆ. ಕಾರ್ತಿಕ್ ನ ಕೊಲೆಯಿಂದಾಗಿ ಇದೀಗ ಆತನ ನಾಲ್ಕು ವರ್ಷ ವಯಸ್ಸಿನ ಮಗಳು ಅನಾಥವಾಗಿದ್ದಾಳೆ.
ಇನ್ನಷ್ಟು ಸುದ್ದಿಗಳು…
ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ | ಆರೋಪಿ ಅರೆಸ್ಟ್
ಸಿಎಂ ರೇಸ್ ನಲ್ಲಿದ್ದ ಬೆಲ್ಲದ್ ಗೆ ಸಚಿವ ಸ್ಥಾನವೂ ಸಿಗಲಿಲ್ಲ | ಶೆಟ್ಟರ್, ಬಿಎಸ್ ವೈಗೆ ಧಿಕ್ಕಾರ ಹೇಳಿದ ಬೆಂಬಲಿಗರು
ಡಯಾಲಿಸಿಸ್ ಗಾಗಿ ಆಸ್ಪತ್ರೆಗೆ ಬಂದಿದ್ದ ಮಹಿಳೆಯ ಮೇಲೆ ವಾರ್ಡ್ ಬಾಯ್ ನಿಂದ ಅತ್ಯಾಚಾರ!
ಕೇರಳ-ಪುತ್ತೂರು ಅಧಿಕೃತ ರಸ್ತೆ ಹೊರತು ಪಡಿಸಿ ಉಳಿದ ರಸ್ತೆಗೆ ಮಣ್ಣು ಹಾಕಿ ಮುಚ್ಚಲು ಶಾಸಕರಿಂದ ಸೂಚನೆ
ಒಂದು ದೇಹದಲ್ಲಿ ಎರಡು ಜೀವ | ಸರ್ಕಾರ ಮತ್ತು ಕಾನೂನಿಗೆ ಸವಾಲಾದ ಸಹೋದರರು