ಶಾಲೆಗಳಿಗೆ ವಿವೇಕದ ಬಣ್ಣ ಹಚ್ಚುವ ಮೊದಲು ಹೆಣ್ಣುಮಕ್ಕಳಿಗೆ ಶೌಚಾಲಯ ಕಟ್ಟಿಸಿ: ಪ್ರಿಯಾಂಕ್ ಖರ್ಗೆ ಟೀಕೆ
ರಾಜ್ಯ ಸರ್ಕಾರ ವಿವೇಕ ಯೋಜನೆಯಡಿಯಲ್ಲಿ ನೂತನ ಶಾಲೆಗಳನ್ನು ಕಟ್ಟಿಸಿ ಅವುಗಳಿಗೆ ಕೇಸರಿ ಬಣ್ಣ ಬಳಿಯುತ್ತಿದೆ. ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಸರ್ಕಾರದ ಆದ್ಯತೆಯ ಬಗ್ಗೆ ತಕರಾರಿದೆ. ಹೆಣ್ಣುಮಕ್ಕಳಿಗೆ ಶೌಚಾಲಯ ನಿರ್ಮಾಣ, ಶಿಕ್ಷಕರ ಕೊರತೆ ನೀಗಿಸುವುದು ಮುಖ್ಯವಾಗಬೇಕಿತ್ತು. ಅದನ್ನ ಬದಿಗಿಟ್ಟು ಧ್ಯಾನ ಮಾಡಿಸುವುದು ಪೋಷಕರಿಂದ ನೂರು ರೂಪಾಯಿ ಕಲೆಕ್ಟ್ ಮಾಡಲಾಗುತ್ತಿದೆ ಇದು ಸರಿಯಲ್ಲ. ನಮ್ಮ ಆದ್ಯತೆ ಶಾಲೆಯ ಶಿಕ್ಷಣ ಮೂಲ ಸೌಕರ್ಯವಾಗಿರಬೇಕೆ ಹೊರತು ಬಣ್ಣ ಬಳಿಯುವುದರಲ್ಲಿ ಅಲ್ಲ ಎಂದು ಕಾಂಗ್ರೆಸ್ ಮುಖಂಡ, ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.
ಹೊಸ್ಸೂರು ಗ್ರಾಮದಲ್ಲಿ ಒಟ್ಟು ರೂ.68.05 ಲಕ್ಷ ವೆಚ್ಚದಲ್ಲಿ ನಿರ್ಮಾಣ ಗೊಳ್ಳುತ್ತಿರುವ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂರು ಕೋಣೆ (ರೂ. 52 ಲಕ್ಷ) ಮಾದಿಗ ಸಮಾಜದ ಓಣಿಯಲ್ಲಿ ಸಾಂಸ್ಕೃತಿಕ ಭವನ (ರೂ 6.05 ಲಕ್ಷ) ಹಾಗೂ ಕೋಲಿ ಸಮಾಜದ ಹತ್ತಿರ ಸಾಂಸ್ಕ್ರತಿಕ ಭವನ (ರೂ 10 ಲಕ್ಷ) ಇವುಗಳಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಇದೂವರೆಗೆ 17,000 ಮಕ್ಕಳು ಶಾಲೆಯಿಂದ ಹೊರಗಿದ್ದಾರೆ. ಅವರನ್ನು ಮತ್ತೆ ಶಾಲೆಗೆ ಕರೆತರಲು ಯಾವುದೇ ಕ್ರಮ ಕೈಗೊಂಡಿಲ್ಲ , ಸರ್ಕಾರ ಶಿಕ್ಷಣದ ಗುಣಮಟ್ಟ ಸುಧಾರಿಸಲು ಕ್ರಮ ಕೈಗೊಂಡಿಲ್ಲ ಅದರ ಬದಲು ವಿವೇಕದ ಅಡಿಯಲ್ಲಿ ಶಾಲೆಗಳಿಗೆ ಕೇಸರಿ ಬಣ್ಣ ಬಳಿಯಲಾಗುತ್ತಿದೆ. ಕೇವಲ ಕೇಸರಿ ಬಣ್ಣ ಬಳಿದ ಮಾತ್ರಕ್ಕೆ ವಿವೇಕವಾಗುತ್ತದೆ ಎಂದು ಹೇಳಲಾಗದು. ವಿವೇಕ ಎಂದರೆ ಬೌಧ್ದಿಕ ಮಟ್ಟದ ಸುಧಾರಣೆಯಾಗಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಒಟ್ಟು 2.50 ಲಕ್ಷ ಹುದ್ದೆಗಳು ಖಾಲಿ ಬಿದ್ದಿವೆ ಅವುಗಳನ್ನು ತುಂಬುವ ಆಸಕ್ತಿ ಇಲ್ಲ. ಆದರೆ KPTCL, PSI , ಪಂಚಾಯತ್ ರಾಜ್ ನೇಮಕಾತಿ ನಡೆಸಿದ್ದರು ಆದರೆ ಅಲ್ಲಿ ಹಣದ ಅವ್ಯವಹಾರ ನಡೆದು ಇಂದು ಲಕ್ಷಾಂತರ ನಿರುದ್ಯೋಗಿ ಯುವಕರ ಭವಿಷ್ಯ ಕತ್ತಲಲ್ಲಿ ಮುಳುಗಿದೆ ಎಂದು ಟೀಕಿಸಿದರು.
ಗ್ರಾಮೀಣ ಭಾಗದ ಅಭಿವೃದ್ದಿ ತಮ್ಮ ಬದ್ಧತೆಯಾಗಿದ್ದು, ಇದೂವರೆಗೆ ಹೊಸ್ಸೂರು ಗ್ರಾಮಕ್ಕೆ ಸಾಕಷ್ಟು ಅನುದಾನ ತಂದು ಅಭಿವೃದ್ದಿ ಕೆಲಸ ಮಾಡಿದ್ದೇನೆ. ಇನ್ನೂ ಹೆಚ್ಚಿನ ಅಭಿವೃದ್ದಿ ಕೆಲಸ ಮಾಡುತ್ತೇನೆ ಎಂದು ಇದೇ ವೇಳೆ ಜನತೆಗೆ ಭರವಸೆ ನೀಡಿದರು.
ಕಳೆದ ಬಾರಿ ಮೊದಲ ಹಂತದಲ್ಲಿ ಹೊಸ್ಸೂರು ಗ್ರಾಮಕ್ಕೆ ರೂ. 60 ಲಕ್ಷ ವೆಚ್ವದಲ್ಲಿ ಶಾಲೆಗಳಿಗೆ ಅನುದಾನ ನೀಡಿದ್ದೆ. ಈಗ ಎರಡನೆಯ ಹಂತದಲ್ಲಿ ಶಾಲೆಗಳ ನಿರ್ಮಾಣಕ್ಕಾಗಿ ರೂ 60 ಲಕ್ಷ ಹೀಗೆ ಒಟ್ಟು ರೂ 1 ಕೋಟಿಗೂ ಅಧಿಕ ಅನುದಾನವನ್ನು ಕೇವಲ ಶಿಕ್ಷಣ ಕ್ಷೇತ್ರದ ಅಭಿವೃದ್ದಿಗೆ ಬಿಡುಗಡೆ ಮಾಡಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.
ನಾನು ಸಚಿವನಾಗಿದ್ದಾಗ ರೂ.80 ಕೋಟಿ ಕಲಬುರಗಿಗೆ ಕೊಟ್ಟಿದ್ದೇನೆ, ಸೇಡಂ, ಕಲಬುರಗಿ ಗ್ರಾಮೀಣ ಹಾಗೂ ಚಿಂಚೋಳಿ ಕ್ಷೇತ್ರಗಳಿಗೆ ಸಾಕಷ್ಟು ಅನುದಾನ ನೀಡಿದ್ದೇನೆ. ಆದರೆ ಈ ಸರ್ಕಾರ ನನ್ನ ಕ್ಷೇತ್ರಕ್ಕೆ ಬಿಡುಗಡೆಯಾಗ ಬೇಕಿದ್ದ ರೂ.200 ಕೋಟಿ ತಡೆ ಹಿಡಿಯಲಾಗಿದೆ ಇದು ದ್ವೇಷದ ರಾಜಕಾರಣದ ಫಲವಾಗಿದೆ ಎಂದು ಇದೇ ವೇಳೆ ಅವರು ಆರೋಪಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರಾದ ಮಹಿಪಾಲ ಮೂಲಿಮನಿ, ನಾಗರೆಡ್ಡಿ ಕರದಾಳ, ಭೀಮಣ್ಣ ಸಾಲಿ, ಮಲ್ಲಿಕಾರ್ಜುನ ಕಾಳಗಿ, ರಮೇಶ ಮರಗೋಳ, ಬಸವರಾಜ್ ಚಿಮ್ಮನ್ನಳ್ಳಿ ಸೇರಿದಂತೆ ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka