ಕಲ್ಲಂಗಡಿ ಹಣ್ಣಿನ ಚಿತ್ರವಿರುವ ಬ್ಯಾಗ್ ನೊಂದಿಗೆ ಪಾರ್ಲಿಮೆಂಟ್ ಪ್ರವೇಶಿಸಿದ ಪ್ರಿಯಾಂಕ ಗಾಂಧಿ
ಅರ್ಧ ಕತ್ತರಿಸಿದ ಕಲ್ಲಂಗಡಿ ಹಣ್ಣಿನ ಚಿತ್ರವಿರುವ ಬ್ಯಾಗ್ ನೊಂದಿಗೆ ಪ್ರಿಯಾಂಕ ಗಾಂಧಿಯವರು ಪಾರ್ಲಿಮೆಂಟ್ ಪ್ರವೇಶಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ಚಿತ್ರವು ಫೆಲೆಸ್ತೀನ್ ಗೆ ಬೆಂಬಲ ಸಾರುವುದರ ಜಾಗತಿಕ ಸಂಕೇತವಾಗಿದೆ.
ಅವರ ಬ್ಯಾಗಿನಲ್ಲಿ ಫೆಲೆಸ್ತೀನ್ ಎಂದು ಇಂಗ್ಲಿಷ್ ನಲ್ಲಿ ಬರೆಯಲಾಗಿದೆ. ಈ ಬ್ಯಾಗನ್ನು ಎತ್ತಿಕೊಂಡು ಪಾರ್ಲಿಮೆಂಟಿನಲ್ಲಿ ನಿಂತಿರುವ ಪ್ರಿಯಾಂಕ ಅವರ ಚಿತ್ರವನ್ನು ಕಾಂಗ್ರೆಸ್ ವಕ್ತಾರೆ ಶಮ ಮೊಹಮ್ಮದ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದಕ್ಕಿಂತ ದಿನಗಳ ಮೊದಲು ದೆಹಲಿಯಲ್ಲಿ ಫೆಲಸ್ತೀನ್ ರಾಜ ತಾಂತ್ರಿಕ ಪ್ರತಿನಿಧಿಯ ಜೊತೆ ಪ್ರಿಯಾಂಕಾ ಮಾತುಕತೆ ನಡೆಸಿದ್ದರು. ಅವರ ವಸತಿಯಲ್ಲೇ ಈ ಮಾತುಕತೆ ನಡೆದಿತ್ತು. ಇದೇ ವೇಳೆ ಫೆಲೆ ಸ್ತೀನಿಯರ ಸ್ವತಂತ್ರ ರಾಷ್ಟ್ರದ ಹೋರಾಟಕ್ಕೆ ಅವರು ಬೆಂಬಲ ಸಾರಿದ್ದರು.
ಪ್ರಿಯಾಂಕ ಅವರ ಈ ಫೆಲಸ್ತೀನ್ ಬ್ಯಾಗ್ ನ ಪೋಸ್ಟಿಗೆ ಸೋಶಿಯಲ್ ಮೀಡಿಯಾದಲ್ಲಿ ಪರ ಮತ್ತು ವಿರುದ್ಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ ಪ್ರಿಯಾಂಕ ಗಾಂಧಿಯವರು ಬ್ಯಾಗನ್ನು ಭುಜಕ್ಕೆ ನೇತಾಡಿಸಿಕೊಂಡು ಪಾರ್ಲಿಮೆಂಟಿಗೆ ಸಾಗುವ ವಿಡಿಯೋ ವೈರಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj