ಬಜರಂಗದಳದ ಕುರಿತಂತೆ ತನಿಖೆಗೆ ಆದೇಶ: ಗಂಟೆಯ ಒಳಗಡೆ ಎಸ್ಪಿ ವರ್ಗಾವಣೆ

ಬಜರಂಗದಳದ ಕುರಿತಂತೆ ತನಿಖೆಗೆ ಆದೇಶಿಸಿದ ಗಂಟೆಗಳೊಳಗೆ ಎಸ್ಪಿಯನ್ನು ವರ್ಗಾವಣೆಗೊಳಿಸಿದ ಘಟನೆ ಗೋವಾದಲ್ಲಿ ನಡೆದಿದೆ. ಬಜರಂಗದಳದ ಪ್ರಮುಖ ನಾಯಕ ಮತ್ತು ಇತರ ಕಾರ್ಯಕರ್ತರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವುದಕ್ಕೆ ಎಲ್ಲಾ ಪೊಲೀಸ್ ಠಾಣೆಗಳಿಗೂ ವಯರ್ಲೆಸ್ ಸಂದೇಶವನ್ನು ಕಳುಹಿಸಿದ ಗಂಟೆಗಳ ಒಳಗೆ ಸೌತ್ ಗೋವಾ ಸೂಪರ್ ಡೆಂಟ್ ಆಫ್ ಪೊಲೀಸ್ ಸುನೀತಾ ಸಾವಂತ್ ನ್ನು ಸರ್ಕಾರ ವರ್ಗಾವಣೆ ಮಾಡಿದೆ.
ಬಜರಂಗದಳದ ನಾಯಕರು ಮತ್ತು ಕಾರ್ಯಕರ್ತರ ವಿವರವನ್ನು ಸಂಗ್ರಹಿಸಿ ತನಗೆ ಸಲ್ಲಿಸಬೇಕು ಎಂದು ಎಲ್ಲ ಪೊಲೀಸ್ ಠಾಣೆಗಳಿಗೆ ಸಾವಂತ್ ನಿರ್ದೇಶನ ನೀಡಿದ್ದರು. ಇದರಂತೆ ಪೊಲೀಸರು ಮಾಹಿತಿಯನ್ನು ಸಂಗ್ರಹಿಸತೊಡಗಿದರು. ಇದನ್ನರಿತ ಬಜರಂಗದಳದ ನಾಯಕರು ಎಸ್ಪಿ ಅವರನ್ನು ಸೌತ್ ಗೋವಾದಿಂದ ವರ್ಗಾವಣೆ ಮಾಡುವಂತೆ ಸರಕಾರದ ಮೇಲೆ ಒತ್ತಡ ಹೇರಿದರು. ಇದಾಗಿ ಗಂಟೆಗಳೊಳಗೆ ಸಾವಂತ್ ಅವರನ್ನು ಸ್ಥಳದಿಂದ ವರ್ಗಾವಣೆ ಮಾಡಲಾಗಿದೆ.
2023 ಜೂನ್ ನಿಂದ ಗೋವಾದಲ್ಲಿ ಬಜರಂಗದಳದ ಕಾಟ ಜಾಸ್ತಿಯಾಗಿದೆ. ಛತ್ರಪತಿ ಶಿವಾಜಿ ಪ್ರತಿಮೆಯನ್ನು ತೆರವುಗೊಳಿಸಿದುದರ ವಿರುದ್ಧ ಭಜರಂಗದಳ ಪ್ರತಿಭಟನೆಯನ್ನು ಸಂಘಟಿಸಿತ್ತು. 2024 ಜುಲೈಯಲ್ಲಿ ರಾಹುಲ್ ಗಾಂಧಿ ಪಾರ್ಲಿಮೆಂಟಲ್ಲಿ ಮಾಡಿದ ಭಾಷಣದ ವಿರುದ್ಧ ದಕ್ಷಿಣ ಗೋವಾದಲ್ಲಿರುವ ಕಾಂಗ್ರೆಸ್ ಕಚೇರಿಯ ಎದುರು ಬಜರಂಗದಳ ಪ್ರತಿಭಟನೆ ನಡೆಸಿತ್ತು. ದ್ವೇಷ ಭಾಷಣಕ್ಕೆ ಕುಖ್ಯಾತಿಯನ್ನು ಪಡೆದಿರುವ ಬಿಜೆಪಿಯ ರಾಜಾ ಸಿಂಗ್ ನನ್ನು ಕರೆದು ಇತ್ತೀಚೆಗಷ್ಟೇ ಅದು ಕಾರ್ಯಕ್ರಮವನ್ನು ಏರ್ಪಡಿಸಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj