ಜೀವನಕ್ಕೆ ವಿದಾಯ ಹೇಳಿದ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಪ್ರೊಫೆಸರ್!
ಮಣಿಪಾಲ: ದಶರಥ ನಗರ ಇಲ್ಲಿಯ ಖಾಸಗಿ ವಸತಿಗೃಹದ ನಾಲ್ಕನೇ ಮಹಡಿಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಪ್ರೊಪೆಸರ್ ಓರ್ವರ ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬುಧವಾರ ನಡೆದಿದೆ.
ವ್ಯಕ್ತಿ ಮೃತಪಟ್ಟು ನಾಲ್ಕು ದಿನ ಕಳೆದಿರಬಹುದೆಂದು ಅಂದಾಜಿಸಲಾಗಿದೆ. ಸಾವಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಮೃತ ವ್ಯಕ್ತಿ ಉತ್ತರಪ್ರದೇಶದ ಅಹಮದ್ ಮಿರ್ಜಾ (38), ಮಣಿಪಾಲದ ಆರ್ಕಿಟೆಕ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದರೆಂದು ತಿಳಿದು ಬಂದಿದೆ.
ಎಸ್ ಐ ನವೀನ್ ನಾಯ್ಕ್, ಸುಕುಮಾರ್ ಹೆಡ್ ಕಾನ್ಸ್ಟೇಬಲ್, ಉಮೇಶ್ ಕಾನ್ಸ್ಟೇಟಬಲ್ ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಕೊಳೆತ ಕಳೇಬರವನ್ನು ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಇಲಾಖೆಗೆ ನೆರವಾದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw