ಪ್ರಾಜೆಕ್ಟ್ ವರ್ಕ್ ನೆಪದಲ್ಲಿ ಮನೆಗೆ ಕರೆಸಿ ವಿದ್ಯಾರ್ಥಿನಿಯ ಮೇಲೆ ಶಿಕ್ಷಕನಿಂದ ಅತ್ಯಾಚಾರ, ಬ್ಲ್ಯಾಕ್ ಮೇಲ್ - Mahanayaka

ಪ್ರಾಜೆಕ್ಟ್ ವರ್ಕ್ ನೆಪದಲ್ಲಿ ಮನೆಗೆ ಕರೆಸಿ ವಿದ್ಯಾರ್ಥಿನಿಯ ಮೇಲೆ ಶಿಕ್ಷಕನಿಂದ ಅತ್ಯಾಚಾರ, ಬ್ಲ್ಯಾಕ್ ಮೇಲ್

kadaba crime news
08/08/2021

ಮಂಗಳೂರು: ಬಾಲಕಿಯ ನಗ್ನ ಚಿತ್ರವನ್ನು ತೆಗೆದ ಸರ್ಕಾರಿ ಶಾಲಾ ಶಿಕ್ಷಕನೋರ್ವ ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಕೃತ್ಯ ಎಸಗಿದ ರಾಯಚೂರು ಮೂಲದ ಶಿಕ್ಷಕ ಹಾಗೂ ಈತನ ಕೃತ್ಯಕ್ಕೆ ಸಹಕಾರ ನೀಡಿದ ಆರೋಪದಲ್ಲಿ ಆತನ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಪ್ರಾಜೆಕ್ಟ್ ವರ್ಕ್ ನ ನೆಪದಲ್ಲಿ ಬಾಲಕಿಯನ್ನು ಮನೆಗೆ ಕರೆಸಿಕೊಂಡಿದ್ದ ಶಿಕ್ಷಕ, ಬಾಲಕಿಯನ್ನು ಅತ್ಯಾಚಾರ ನಡೆಸಿದ್ದು, ಬಳಿಕ ಆಕೆಯ ನಗ್ನ ಚಿತ್ರವನ್ನು ಫೋಟೋ ತೆಗೆದಿದ್ದು, ಬಳಿಕ ಮನೆಯಿಂದ ಹಣ ತೆಗೆದುಕೊಂಡು ಬಾ ಎಂದು ಬಾಲಕಿಯನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

2018ರಿಂದಲೂ ರಾಯಚೂರು ಮೂಲದ ಈ ಶಿಕ್ಷಕ ಇಂತಹ ಕೃತ್ಯಗಳನ್ನು ನಡೆಸುತ್ತಿದ್ದಾನೆ ಎಂದು ಹೇಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ನೀಡಿದ ದೂರಿನನ್ವಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಇನ್ನಷ್ಟು ಸುದ್ದಿಗಳು…

 

ವಿದ್ಯಾರ್ಥಿನಿ ಜೊತೆಗೆ ರಾಸಲೀಲೆ ನಡೆಸುತ್ತಿರುವಾಗಲೇ ಪತ್ನಿಯ ಕೈಗೆ ಸಿಕ್ಕಿ ಬಿದ್ದ ಪ್ರಾಧ್ಯಾಪಕ! | “ರೇಪ್ ಮಾಡ್ದ” ಎಂದಿದ್ದ ವಿದ್ಯಾರ್ಥಿನಿ ಯೂಟರ್ನ್!?

ಮತ್ತು ಬರುವ ಔಷಧಿ ನೀಡಿ ಮಹಿಳಾ ಪೊಲೀಸ್ ಮೇಲೆ ಸಬ್ ಇನ್ಟ್ ಪೆಕ್ಟರ್ ನಿಂದ ಅತ್ಯಾಚಾರ

ಪತಿಯೇ ಪತ್ನಿಯನ್ನು ನದಿಗೆ ತಳ್ಳಿದನೇ? | ಪತಿಯನ್ನು ಹಿಂಬಾಳಿಸಿ ಹೋದವಳು ಮರಳಿ ಬರಲಿಲ್ಲ!

3ನೇ ಅಲೆಗೆ ಸೆಡ್ಡು ಹೊಡೆಯಲು ಸಿಂಗಲ್ ಡೋಸ್ ಲಸಿಕೆಗೆ ಗ್ರೀನ್ ಸಿಗ್ನಲ್ ನೀಡಿದ ಕೇಂದ್ರ ಸರ್ಕಾರ

ಮತ್ತೆ ಕೃಷ್ಣನ ತಂತ್ರಗಾರಿಗೆ ತೋರುತ್ತಾರಾ ರಮೇಶ್ ಜಾರಕಿಹೊಳಿ?

ಇತ್ತೀಚಿನ ಸುದ್ದಿ