ಪ್ರವಾದಿಯ ಅವಹೇಳನಾಕಾರಿ ವ್ಯಂಗ್ಯ ಚಿತ್ರ ಬಿಡಿಸಿದ್ದ ವಿವಾದಿತ ಕಲಾವಿದ ಅಪಘಾತದಲ್ಲಿ ಸಾವು! - Mahanayaka
10:15 PM Thursday 14 - November 2024

ಪ್ರವಾದಿಯ ಅವಹೇಳನಾಕಾರಿ ವ್ಯಂಗ್ಯ ಚಿತ್ರ ಬಿಡಿಸಿದ್ದ ವಿವಾದಿತ ಕಲಾವಿದ ಅಪಘಾತದಲ್ಲಿ ಸಾವು!

lars vilks
04/10/2021

ಸ್ವೀಡನ್‌: ಪ್ರವಾದಿ ಮಹಮ್ಮದ್ ಅವರನ್ನು ಅವಹೇಳನಾಕಾರಿಯಾಗಿ ವ್ಯಂಗ್ಯ ಚಿತ್ರ ಬಿಡಿಸಿದ ವ್ಯಂಗ್ಯ ಚಿತ್ರಕಾರ, ಸ್ವೀಡನ್ ಕಲಾವಿದ ಅಪಘಾತದಲ್ಲಿ ಸಾವನ್ನಪ್ಪಿದ್ದು, ಪೊಲೀಸ್ ಭದ್ರತೆಯಲ್ಲಿರುವ ಸಂದರ್ಭದಲ್ಲಿಯೇ ಅವರು ಅಪಘಾತಕ್ಕೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

75 ವರ್ಷ ವಯಸ್ಸಿನ ಸ್ವಿಡೀಶ್‌ ವ್ಯಂಗ್ಯಚಿತ್ರಕಾರ ಲಾರ್ಸ್ ವಿಲ್ಕ್ಸ್ ಮೃತಪಟ್ಟ ಕಲಾವಿದರಾಗಿದ್ದು, ಪೊಲೀಸ್ ರಕ್ಷಣೆಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ  ದಕ್ಷಿಣ ಸ್ವೀಡನ್‌ ನ ಮಾರ್ಕರಿಡ್ ಪಟ್ಟಣದ ಬಳಿ ಎದುರಿನಿಂದ ಬರುತ್ತಿದ್ದ ಟ್ರಕ್ ವೊಂದು ರಸ್ತೆ ವಿಭಜಕಕ್ಕೆ ಡಿಕ್ಕಿಹೊಡೆದು ಲಾರ್ಸ್ ವಿಲ್ಕ್ಸ್ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಹತ್ತಿದೆ ಎಂದು ತಿಳಿದು ಬಂದಿದೆ.

2007 ರಲ್ಲಿ ಇಸ್ಲಾಮಿಕ್ ಪ್ರವಾದಿಯನ್ನು ನಾಯಿಯ ದೇಹದಿಂದ ಚಿತ್ರಿಸಿದ್ದಕ್ಕಾಗಿ ಲಾರ್ಸ್ ವಿಲ್ಕ್ಸ್ ಗೆ ತೀವ್ರ ಜೀವ ಬೆದರಿಕೆಗಳಿದ್ದವು. ಹೀಗಾಗಿ ಅವರಿಗೆ ಪೊಲೀಸ್ ಭದ್ರತೆಯನ್ನು ನೀಡಲಾಗಿತ್ತು. ಆದರೆ ಇದೀಗ ಅವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…




ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ಬಿಜೆಪಿ ರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಬ್ರಿಟಿಷರು ಕೂಡ ಮಾಡಿರಲಿಲ್ಲ | ಅಖಿಲೇಶ್ ಯಾದವ್

ರೈತರ ಹತ್ಯಾಕಾಂಡ: ಬೇಡಿಕೆ ಈಡೇರದ ಹೊರತು ಮೃತ ರೈತರ ಅಂತ್ಯಸಂಸ್ಕಾರ ಮಾಡಲ್ಲ |  ರಾಕೇಶ್ ಟಿಕಾಯತ್ ಪಟ್ಟು

ಲಿಖಿಂಪುರ ರೈತರ ಹತ್ಯಾಕಾಂಡ: ಬಿಎಸ್ ಪಿ ನಾಯಕರನ್ನೂ ಗೃಹ ಬಂಧನದಲ್ಲಿರಿಸಲಾಗಿದೆ | ಮಾಯಾವತಿ

ಹತ್ಯೆಯಾದ 8 ರೈತರ ಕುಟುಂಬಗಳ ಭೇಟಿಗೆ ತೆರಳಿದ ಪ್ರಿಯಾಂಕಾ ಗಾಂಧಿ ಅರೆಸ್ಟ್!

ಪತ್ನಿಯನ್ನು 500 ರೂಪಾಯಿಗೆ ಮಾರಾಟ ಮಾಡಿದ ಪತಿ | ಖರೀದಿಸಿದವನಿಂದ ಮಹಿಳೆಯ ಅತ್ಯಾಚಾರ

ಇತ್ತೀಚಿನ ಸುದ್ದಿ