ಕಟಪಾಡಿಯಲ್ಲಿ ಅಸಹಾಯಕ ವೃದ್ಧನ ರಕ್ಷಣೆ : ವಾರೀಸುದಾರರ ಪತ್ತೆಗೆ ಮನವಿ - Mahanayaka

ಕಟಪಾಡಿಯಲ್ಲಿ ಅಸಹಾಯಕ ವೃದ್ಧನ ರಕ್ಷಣೆ : ವಾರೀಸುದಾರರ ಪತ್ತೆಗೆ ಮನವಿ

hosabelaku
14/12/2022

ಉಡುಪಿ : ಸೊಂಟದ ಮೂಳೆ ಮುರಿತಕ್ಕೊಳಗಾಗಿ ಚಿಕಿತ್ಸೆ ಪಡೆದು ನಡೆಯಲಾಗದೆ ಕಟಪಾಡಿಯ ರಾಷ್ಟೀಯ ಹೆದ್ದಾರಿ ಬಳಿಯ ಹಳೇ ಕಟ್ಟಡವೊಂದರಲ್ಲಿ ಆಶ್ರಯ ಪಡೆದುಅಸಹಾಯಕರಾಗಿ ಸಹಾಯಕ್ಕಾಗಿ ಯಾಚಿಸುತ್ತಿದ್ದ ಜಯಕರ ಶೆಟ್ಟಿ (೬೫) ಎಂಬವರನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಮಂಗಳವಾರ ರಕ್ಷಿಸಿ ಬೈಲೂರು ರಂಗನಪಲ್ಕೆಯ ಹೊಸ ಬೆಳಕು ಆಶ್ರಮಕ್ಕೆ ದಾಖಲಿಸಿದ್ದಾರೆ.


Provided by

ರಕ್ಷಿಸಲ್ಪಟ್ಟ ಜಯಕರ ಶೆಟ್ಟಿ ಅವರು ಮೂಲತ: ಮೂಲ್ಕಿ ಕಿಲ್ಪಾಡಿಯ ತಿರುಮಲಗುತ್ತು ಮನೆತನದವರೆಂದು ವೃದ್ದ ತಿಳಿಸಿದ್ದು ಸಂಬಂಧಿಕರು ಹಿರಿಯಡಕ ಹಾಗೂ ಮುಂಬೈಯಲ್ಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ವೃದ್ಧರು ಈ ಹಿಂದೆ ಸೊಂಟದ ಮೂಳೆ ಮುರಿತಕ್ಕೊಳಗಾಗಿ ಚಿಕಿತ್ಸೆ ಪಡೆದರೂ ಆರೈಕೆ ಮಾಡುವವರಿಲ್ಲದೆ ಬೀದಿ ಪಾಲಾಗಿದ್ದರು.ರಕ್ಷಣಾ ಕಾರ್ಯಾಚರಣೆಯಲ್ಲಿ ಕಟಪಾಡಿಯ ಆಸ್ಟಿನ್ ಹಾಗೂ ರಾಮದಾಸ ಪಾಲನ್ ಉದ್ಯಾವರ ಸಹಕರಿಸಿದ್ದರು. ಸಂಬಂಧಿಕರು ಹೊಸಬೆಳಕು ಆಶ್ರಮವನ್ನು ಸಂಪರ್ಕಿಸಲು ವಿಶು ಶೆಟ್ಟಿ ಕೋರಿದ್ದಾರೆ. (ಮೊಬೈಲ್ ಸಂಖ್ಯೆ -9620417570) 


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ