ಮಹಿಳೆಯರ ರಕ್ಷಣೆ ನಮ್ಮ ಮೊದಲ ಆದ್ಯತೆ: ಸಿಎಂ ಬಸವರಾಜ ಬೊಮ್ಮಾಯಿ - Mahanayaka
10:27 PM Thursday 12 - December 2024

ಮಹಿಳೆಯರ ರಕ್ಷಣೆ ನಮ್ಮ ಮೊದಲ ಆದ್ಯತೆ: ಸಿಎಂ ಬಸವರಾಜ ಬೊಮ್ಮಾಯಿ

cm bommai
04/03/2023

ಬೆಂಗಳೂರು: ಮಹಿಳೆಯರ ರಕ್ಷಣೆ ನಮ್ಮ ಮೊದಲ ಆದ್ಯತೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರು ಸುರಕ್ಷಿತ ನಗರ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಪಾಲ್ಗೊಂಡು ಮಾತನಾಡಿದರು

ರಾಜ್ಯದಲ್ಲಿ ಅಪರಾಧ ಪ್ರಮಾಣ ಕಡಿಮೆಯಾಗಿದೆ.  ಹೆಣ್ಣು ಮಕ್ಕಳು ನಿರ್ಭಯವಾಗಿ ಓಡಾಡುವ ಪರಿಸ್ಥಿತಿ ಇರಬೇಕು.   ನಮ್ಮ ಪೊಲಿಸರ ಮೇಲಿನ ನಂಬಿಕೆಯಿಂದ ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ   ಕೆಲಸ ಮಾಡಲು  ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗದೆ. ಮಹಿಳೆಯರು ಪುರುಷರು  ಸಮಾನವಾಗಿ ಕೆಲಸ ಮಾಡುವ ವ್ಯವಸ್ಥೆಯಾಗಬೇಕು ಎನ್ನುವ ಕಾರಣಕ್ಕೆ ಮಹಿಳೆಯರಿಗೆ ರಾತ್ರಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

ದೌರ್ಜನ್ಯ ತಡೆಯಲು ಕ್ರಮ:

ದೇಶದ 130 ಕೋಟಿ  ಜನ ಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರಿದ್ದಾರೆ.  ಎಲ್ಲರಿಗೂ ಬದುಕಿನಲ್ಲಿ ಮುಂದುಬರೆಬೇಕೆನ್ನುವ ಉತ್ಸಾಹವಿದ್ದು, ಮಹಿಳೆಯರಲ್ಲಿ ಇದು ದೊಡ್ಡ ಪ್ರಮಾಣದಲ್ಲಿ ಇದೆ.

ಅವರೂ ಶಾಲೆಗೆ ಹಾಗೂ ಉದ್ಯೋಗಕ್ಕೆ ಹೋಗಬೇಕು. ಆದರೆ ಹಲವಾರು ಸಂದರ್ಭಗಳಲ್ಲಿ ಅವರ ಮೇಲೆ ದೌರ್ಜನ್ಯ ಆಗುತ್ತಿದೆ.  ಇದನ್ನು ತಡೆಯಲು ಹಲವಾರು ಉಪಾಯಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೈಗೊಂಡಿದೆ ನಿರ್ಭಯ ಪ್ರಕರಣದ  ನಂತರ  ಕಾನೂನು ತರಲಾಗಿದೆ. ಕಾನೂನಿಗೆ ಬಲ ತುಂಬಲು ಕಾನೂನಿನ ವ್ಯವಸ್ಥೆಯ ನಿರ್ವಹಣೆ ಅಗತ್ಯ. ವ್ಯಾಪಕವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಒದಗಿಸುವುದು ಸವಾಲು. ಅಂಥಹುದರಲ್ಲಿ ಮಹಿಳೆಯರ ಸುರಕ್ಷತೆ ಒದಗಿಸುವ ಮಹತ್ವದ ಕೆಲಸವಿದ್ದರೂ, ತಂತ್ರಜ್ಞಾನದ ಬಳಕೆ ಇಲ್ಲದೆ ಅದು ಅಸಾಧ್ಯ ಎಂದು ಮನಗಂಡು ಕೇಂದ್ರ ಸರ್ಕಾರ 668 ಕೋಟಿ ರೂ ವೆಚ್ಚದಲ್ಲಿ ಈ ಯೋಜನೆ ಜಾರಿಗೆ ತಂದಿದೆ. ಯೋಜನೆ ರೂಪಿಸಲು ಸ್ವಲ್ಪ ಸಮಯ ಹಿಡಿಯಿತಾದರೂ ಸವಾಲಿನ ಕೆಲಸವನ್ನು ಕೈಗೆತ್ತಿಕೊಂಡು  ಈ ಯೋಜನೆ ಯಾವ ರೀತಿ ಅನುಷ್ಠಾನಗೊಳಿಸಬೇಕು ಎನ್ನುವ ಕುರಿತು ಸಾಕಷ್ಟು ಸಂಶೋಧನೆ ಮಾಡಲಾಯಿತು.   ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ   ಕೃತಕ ಬುದ್ಧಿಮತ್ತೆ ಬಳಸಿ  ಕ್ಯಾಮರಾಗಳನ್ನು ಅಳವಡಿಸಿ ಈಗ ಎಲ್ಲೆಡೆ ಸಂಖ್ಯೆಯನ್ನು  ಕ್ಯಾಮೆರಾ ಹೆಚ್ಚಿಸಲಾಗಿದೆ. ಈಗಾಗಲೇ 4 ಸಾವಿರ ಕ್ಯಾಮರಾ ಅಳವಡಿಸಲಾಗಿದೆ. ಡಾರ್ಕ್ ಸ್ಪಾಟ್ ಗಳಲ್ಲಿ  ಆದ್ಯತೆ ಮೇರೆಗೆ ಕ್ಯಾಮರಾ  ಅಳವಡಿಸಬೇಕು ಎಂದು ಸಲಹೆ ನೀಡಿದರು.

6 ಮಹಿಳಾ ಪೊಲೀಸ್ ಠಾಣೆ:

ಈ ಯೋಜನೆಯಡಿ 112 ದ್ವಿಚಕ್ರ ವಾಹನಗಳನ್ನು ಇದಕ್ಕೆ ಜೋಡಿಸಿರುವುದು  ಶ್ಲಾಘನೀಯ. ಅತ್ಯಾಧುನಿಕ ಕ್ಯಾಮರಾಗಳ ಸದ್ಬಳಕೆಯಾಗಬೇಕು. ಕಮಾಂಡ್ ಸೆಂಟರ್ ಹೆಚ್ಚು ಪ್ರಬಲವಾಗಿರಬೇಕು. ಕಡಿಮೆ ಸಮಯದಲ್ಲಿ ಘಟನಾ ಸ್ಥಳಕ್ಕೆ ತಲುಪುವುದು ಪೊಲೀಸರ ದಕ್ಷತೆಯನ್ನು ಬಿಂಬಿಸುತ್ತದೆ.   8 ಸಿಇ ಎನ್  ಪೊಲೀಸ್ ಠಾಣೆಗಳಿವೆ. ಸಂಚಾರ ದಟ್ಟಣೆ ಕಡಿಮೆ ಮಾಡಲು 4 ಹೊಸ ಪೊಲೀಸ್ ಠಾಣೆ  ನೀಡಿದ್ದು, ಈ ಬಾರಿಯ ಬಜೆಟ್ ನಲ್ಲಿ  9 ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆ, 5 ಸಂಚಾರ ಪೋಲಿಸ್  ಠಾಣೆ ಮತ್ತು 6 ಮಹಿಳಾ ಪೊಲೀಸ್ ಠಾಣೆ ಮಂಜೂರು ಮಾಡಲಾಗಿದೆ ಎಂದರು.

ಗೃಹ ಸಚಿವರ ಬೆಂಬಲ:

ಇವೆಲ್ಲವೂ ಕೇಂದ್ರ ಗೃಹ ಸಚಿವರ ಬೆಂಬಲದಿಂದ ಸಾಧ್ಯವಾಗಿದೆ. ಗುಜರಾತಿನ ನಂತರ ಎಫ್.ಎಸ್.ಎಲ್ ವಿಶ್ವವಿದ್ಯಾಲಯವನ್ನು ಕರ್ನಾಕಕ್ಕೆ ನೀಡಿದ್ದಾರೆ.  ಎಫ್.ಎಸ್.ಎಲ್. ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಪರಾಧ ನಿಯಂತ್ರಣ, ಪಿ.ಎಫ್.ಐ ರದ್ದತಿ, ಭಯೋತ್ಪಾದನೆ ಚಟುವಟಿಕೆ ಯನ್ನು ನಿರ್ಮೂಲನೆ ಮಾಡುವ ಸಲುವಾಗಿ  ಅವರು  ಸಹಾಯ ಮಾಡುತ್ತಿದ್ದಾರೆ. ಮಾದಕ ವಸ್ತು ಗಳ ನಿಯಂತ್ರಣಕ್ಕೆ ಕಠಿಣ ಕ್ರಮ ವಹಿಸಿದೆ. ಅವರು ಕರ್ನಾಟಕದ ಬೆಳವಣಿಗೆಯನ್ನು ಹತ್ತಿರದಿಂದ ಗಮನಿಸುತ್ತಿದ್ದಾರೆ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ