ಅಕ್ರಮ ಟೋಲ್ ಸುಲಿಗೆ ತಡೆಯಲು ವಿಫಲರಾದ ಬಿಜೆಪಿ ಸಂಸದ, ಶಾಸಕರ ವಿರುದ್ಧ ಪ್ರತಿಭಟನೆ
ಅಕ್ರಮ ಟೋಲ್ ಸುಲಿಗೆಯನ್ನು ತಡೆಯಲು ವಿಫಲರಾದ ಬಿಜೆಪಿ ಸಂಸದ, ಶಾಸಕರ ಜನವಿರೋಧಿ ನೀತಿಯನ್ನು ಖಂಡಿಸಿ ಹಾಗೂ ಸುರತ್ಕಲ್ ಅಕ್ರಮ ಟೋಲ್ ಗೇಟ್ ಸುಂಕವನ್ನು ಹೆಜಮಾಡಿಯಲ್ಲಿ ಸಂಗ್ರಹಿಸುವ ಸುಲಿಗೆ ನೀತಿ ಕೈ ಬಿಡುವಂತೆ ಒತ್ತಾ ಯಿಸಿ ಹೆಜಮಾಡಿ ಟೋಲ್ ಗೇಟ್ ಸಮೀಪ ಹೆಜಮಾಡಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಹಾಗೂ ಸಮಾನ ಮನಸ್ಕ ಸಂಘಟನೆಗಳು ದ.ಕ. ಜಿಲ್ಲೆ ಮತ್ತು ಉಡುಪಿ ಜಿಲ್ಲೆ ವತಿಯಿಂದ ಹೋರಾಟಕ್ಕೆ ಚಾಲನೆ ಸಾಮೂಹಿಕ ಧರಣಿ ನಡೆಸಲಾಯಿತು.
ಧರಣಿಯಲ್ಲಿ ಮುನೀರ್ ಕಾಟಿಪಳ್ಳ ಹೋರಾಟ ಸಮಿತಿ ಸಂಚಾಲಕರು, ವಿನಯ್ ಕುಮಾರ್ ಸೊರಕೆ ಮಾಜಿ ಸಚಿವರು, ಯಾದವ್ ಶೆಟ್ಟಿ ಸಿಪಿಐ ಎಂ ಮುಖಂಡರು, ದೇವಿಪ್ರಸಾದ್ ಶೆಟ್ಟ ಬೆಳಪು, ಮುಖಂಡರು, ನವೀನಚಂದ್ರ ಶೆಟ್ಟಿ ಕಾಪು ಬ್ಲಾಕ್ ಕಾಂಗ್ರೇಸ್ ನ ಮಾಜಿ ಅಧ್ಯಕ್ಷರು, ಐವನ್ ಡಿಸೋಜ ಮಾಜಿ ವಿಧಾನ ಪರಿಷತ್ ಸದಸ್ಯರು, ಶಾಲೆಟ್ ಪಿಂಟೋ ದ.ಕ. ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ, ಕೆ.ಅಶ್ರಫ್ ಮಂಗಳೂರು ಮನಪಾ ಮಾಜಿ ಮೇಯರ್, ಬಿ ಕೆ ಇಮ್ತಿಯಾಜ್ ಡಿ ವೈ ಎಫ್ ಐ ಜಿಲ್ಲಾಧ್ಯಕ್ಷರು, ಶೇಖರ್ ಹೆಜಮಾಡಿ ದಲಿತ ಮುಖಂಡರು, ಯೋಗೀಶ್ ಶೆಟ್ಟಿ ಜೆಡಿಎಸ್ ಜಿಲ್ಲಾಧ್ಯಕ್ಷರು, ಸುಧಾಕರ್ ಶೆಟ್ಟಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ, ನವೀನಚಂದ್ರ ಶೆಟ್ಟಿ ಕೆಪಿಸಿಸಿ ಕೋ ಆರ್ಡಿನೇಟರ್, ರಾಲ್ಫಿ ಡಿಸೋಜ ಮುಖಂಡರು, ಹಾಗೂ ಮತ್ತಿತರರ ಮುಖಂಡರು ಭಾಗವಹಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka