ಕಾಪು: ಹಿಂದಿ ದಿವಸ್ ಕಾರ್ಯಕ್ರಮ ಆಯೋಜನೆ ವಿರೋಧಿಸಿ ಜೆಡಿಎಸ್ ಪ್ರತಿಭಟನೆ
ಕಾಪು : ಹಿಂದಿ ದಿವಸ್ ಕಾರ್ಯಕ್ರಮ ಆಯೋಜನೆಯನ್ನು ಖಂಡಿಸಿ ಬುಧವಾರ ಕಾಪು ಪೇಟೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ನೇತ್ರತ್ವದಲ್ಲಿ ಹಿಂದಿ ದಿವಸ್ ವಿರೋಧಿ ದಿನ ಪ್ರತಿಭಟನೆ ನಡೆಯಿತು.
ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಮಾತನಾಡಿ ವಿವಿಧತೆಯಲ್ಲಿ ಏಕತೆಯನ್ನು ಪ್ರದರ್ಶಿಸುತ್ತಿರುವ ನಮ್ಮ ದೇಶದಲ್ಲಿ ಆಯಾ ಪ್ರದೇಶಕ್ಕನುಗುಣವಾಗಿ ಪ್ರಾದೇಶಿಕತೆಗೆ ಹೆಚ್ಚಿನ ಒತ್ತು ನೀಡಬೇಕಿದ್ದು ಅಂತಹ ಸಂದರ್ಭದಲ್ಲಿ ಹಿಂದಿ ಭಾಷೆಗೆ ಪ್ರಾಮುಖ್ಯತೆ ನೀಡುತ್ತಿರುವುದು ಖಂಡನೀಯವಾಗಿದೆ. ಈ ಬಗ್ಗೆ ರಾಜ್ಯದ ಜನರೆಲ್ಲರೂ ಸಂಘಟಿತ ಹೋರಾಟ ನಡೆಸಬೇಕಿದೆ ಎಂದರು.
ಜೆಡಿಎಸ್ ಮುಖಂಡರಾದ ಜಯರಾಮ ಆಚಾರ್ಯ,ಸಂಕಪ್ಪ ಎ., ಉಮೇಶ್ ಕರ್ಕೇರ, ಭರತ್ ಶೆಟ್ಟಿ, ಇಕ್ಬಾಲ್ ಆತ್ರಾಡಿ, ಶ್ರೀಕಾಂತ್ ಪೂಜಾರಿ, ಸುಧಾಕರ್ ಶೆಟ್ಟಿ, ಸಂಜಯ್ ಕುಮಾರ್, ಹುಸೈನ್ ಹೈಕಾಡಿ, ಮನ್ಸೂರು ಇಬ್ರಾಹಿಂ, ವಿಮಲ, ಇಸ್ಮಾಯಿಲ್ ಪಲಿಮಾರ್, ವೆಂಕಟೇಶ ಎಂ ಟಿ., ಶಂಶುದ್ದಿನ್, ಅಬ್ದುಲ್ ರಜಾಕ್, ಚಂದ್ರಹಾಸ ಎರ್ಮಾಳು ಪಕ್ಷ ಕಾರ್ಯಕರ್ತರು ಮೊದಲಾದವರು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka