ಔರಂಗಜೇಬ್ ಸಮಾಧಿಯನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ: ಫಡ್ನವೀಸ್ ಹೊಸ ವಾದವೇನು ಗೊತ್ತಾ?

ಔರಂಗಜೇಬ್ ಸಮಾಧಿಯನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಸಂಘಪರಿವಾರ ನಾಗಪುರದಲ್ಲಿ ನಡೆಸಿರುವ ಪ್ರತಿಭಟನೆಗೆ ಮುಖ್ಯಮಂತ್ರಿ ಫಡ್ನವಿಸ್ ಅವರು ‘ಚಾವ’ ಸಿನಿಮಾವನ್ನು ದೂಷಿಸಿದ್ದಾರೆ. ಈ ಹಿಂಸಾಚಾರವು ಪೂರ್ವಯೋಜಿತ ಎಂದು ಕೂಡ ಅವರು ಹೇಳಿದ್ದಾರೆ. ನಿರ್ದಿಷ್ಟ ಸಮುದಾಯದ ಮನೆ ಮತ್ತು ಅಂಗಡಿಗಳನ್ನೇ ದುಷ್ಕರ್ಮಿಗಳು ಗುರಿ ಮಾಡಿದ್ದಾರೆ ಎಂದು ಕೂಡ ಅವರು ಹೇಳಿದ್ದಾರೆ.
ಹಿಂಸಚಾರದ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಈ ಹಿಂಸಾಚಾರಕ್ಕೆ ಛಾವ ಸಿನಿಮಾ ಪ್ರೇರಣೆ ನೀಡಿದೆ ಎಂದು ಅವರು ಹೇಳಿದ್ದಾರೆ.
ಸಂಘ ಪರಿವಾರ ನಡೆಸಿದ ಮಾರ್ಚಿನ ಬಳಿಕ ಉಂಟಾದ ಘರ್ಷಣೆಗೆ ಸಂಬಂಧಿಸಿ 50 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಕಲ್ಲುತೂರಾಟ ಮತ್ತು ಘರ್ಷಣೆಯಲ್ಲಿ ಅನೇಕ ಮಂದಿಗೆ ಗಾಯಗಳಾಗಿವೆ. ಪೊಲೀಸರಿಗೂ ಗಾಯಗಳಾಗಿವೆ. ನಾಗಪುರದ ಹಲವು ಕಡೆ ನಿಷೇಧಾಜ್ಞೆಯನ್ನು ಹೇರಲಾಗಿದೆ. 17ನೇ ಶತಮಾನದ ದೊರೆಯಾಗಿರುವ ಔರಂಗಜೇಬನ ಸಮಾಧಿಯು ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರ್ ಜಿಲ್ಲೆಯಲ್ಲಿ ಇದೆ. ಈ ಮೊದಲು ಈ ಛತ್ರಪತಿ ಸಂಭಾಜಿ ನಗರಕ್ಕೆ ಔರಂಗಬಾದ್ ಎಂಬ ಹೆಸರು ಇತ್ತು. ಹಿಂಸಾಚಾರಕ್ಕೆ ಬಿಜೆಪಿಯೇ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj