ಕುಡಿಯುವ ನೀರಿಗಾಗಿ ಪಂಚಾಯತ್ ಎದುರು ನೀರಿನ ಕೊಡ ಇಟ್ಟು ಪ್ರತಿಭಟನೆ
ಬೆಳ್ತಂಗಡಿ: ಶಿರ್ಲಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಂಬಾರು ಬಂತಡ್ಕದ ಜನತೆಗೆ ಕುಡಿಯಲು ನೀರಿಲ್ಲ ಎಂದು ಆಕ್ರೋಶಗೊಂಡು ಪಂಚಾಯತ್ ಬಳಿ ನೀರಿನ ಕೊಡ, ಬಕೇಟ್ ಗಳ ಜೊತೆಗೆ ಬಂದು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.
ಕಳೆದ ನಾಲ್ಕೈದು ದಿವಸಗಳಿಂದ ಸರಿಯಾದ ರೀತಿಯಲ್ಲಿ ನೀರಿಲ್ಲದ ಕಾರಣ ಇಂದು ಸ್ಥಳೀಯರು ಗ್ರಾಮ ಪಂಚಾಯತಿಗೆ ತೆರಳಿ ಪ್ರತಿಭಟನೆ ನಡೆಸಿದರು.
ಪಂಚಾಯತ್ ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು ನಮಗೆ ಸರಿಯಾದ ರೀತಿಯಲ್ಲಿ ನೀರು ಇಲ್ಲ ಎಂದು ಅಕ್ರೋಶ ಹೊರ ಹಾಕಿದರು. ವಿದ್ಯುತ್ ಸಮಸ್ಯೆಯ ಬಗ್ಗೆ ಅಧಿಕಾರಿಗಳು ತಿಳಿಸಿದಾಗ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿ ವಿದ್ಯುತ್ ಇರುವ ಸಮಯ ನೋಡಿ ನೀರು ಕೊಡುವ ಕಾರ್ಯ ಮಾಡಬೇಕು ಎಂದು ಆಗ್ರಹಿಸಿದರು.
ಸ್ಥಳೀಯರಾದ ಆನಂದ ಪೂಜಾರಿ, ತಿಮ್ಮಪ್ಪ ಶೆಟ್ಟಿ, ಸಿದ್ದೀಕ್ ಬಂತಡ್ಕ, ಹರೀಶ, ಸುರೇಶ, ಲಕ್ಷ್ಮಿ , ಅಶ್ರಫ್, ಮೊಹಮ್ಮದ್, ಕೊರಗಪ್ಪ ಮೊದಲಾದರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಈ ವೇಳೆ ಮಾತನಾಡಿದ ಪಿಡಿಒ ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw