ಗುಂಪಿನಲ್ಲಿ ಪ್ರತಿಭಟನೆ: ಬಾಂಗ್ಲಾದೇಶಿ ನಾಗರಿಕರಿಗೆ ಕಠಿಣ ಶಿಕ್ಷೆ ವಿಧಿಸಿದ ಅಬುಧಾಬಿ ಕೋರ್ಟ್
ಯುಎಇಯ ವಿವಿಧ ಪ್ರದೇಶಗಳಲ್ಲಿ ಗುಂಪುಗೂಡಿ ಪ್ರತಿಭಟನೆ ನಡೆಸಿದ ಬಾಂಗ್ಲಾದೇಶಿ ನಾಗರಿಕರಿಗೆ ಅಬುಧಾಬಿ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ. ಮೂರು ಮಂದಿಗೆ ಜೀವಾವಧಿ ಶಿಕ್ಷೆ, 53 ಮಂದಿಗೆ 10 ವರ್ಷಗಳ ಜೈಲು ಮತ್ತು ಗಡಿಪಾರು ಹಾಗೂ ಓರ್ವನಿಗೆ 11 ವರ್ಷ ಜೈಲು ಮತ್ತು ಗಡಿಪಾರು ಶಿಕ್ಷೆಯನ್ನು ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಸರಕಾರಿ ವಿರೋಧಿ ಪ್ರತಿಭಟನೆಯ ಪರ ಇವರು ಯುಎಇಯಲ್ಲಿ ಪ್ರತಿಭಟಿಸಿರುವುದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.
ಕಳೆದ ಶುಕ್ರವಾರ ಈ ಪ್ರತಿಭಟನೆ ನಡೆದಿತ್ತು ಇದೀಗ ಒಂದೇ ವಾರದೊಳಗೆ ಪ್ರಕರಣದ ವಿಚಾರಣೆ ನಡೆಸಿ ಶಿಕ್ಷೆಯನ್ನು ವಿಧಿಸಲಾಗಿದೆ. ದೇಶದ ವಿರುದ್ಧ ಜನರನ್ನು ಬಂಡಾಯಕ್ಕೆ ಪ್ರೇರೇಪಿಸುವ ಆರೋಪವನ್ನು ಅವರ ಮೇಲೆ ಹೊರಿಸಲಾಗಿತ್ತು. ಬಾಂಗ್ಲಾದೇಶದಲ್ಲಿ ಮೀಸಲಾತಿಗೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಿಂದ ಪ್ರೇರಣೆಗೊಂಡು ಈ ಬಾಂಗ್ಲಾದೇಶಿ ನಾಗರಿಕರು ಪ್ರತಿಭಟನೆ ನಡೆಸಿದ್ದರು.
ಯುಎಇ ಯ ವಿವಿಧ ರಸ್ತೆಗಳಲ್ಲಿ ದೊಡ್ಡಮಟ್ಟದ ರ್ಯಾಲಿ ಪ್ರತಿಭಟನೆಗಳನ್ನು ಬಾಂಗ್ಲಾದೇಶಿ ನಾಗರಿಕರು ನಡೆಸಿದ್ದರು. ಇವರ ಪರ ವಕೀಲರು ಈ ಪ್ರತಿಭಟನೆಯಲ್ಲಿ ಕ್ರಿಮಿನಲ್ ಉದ್ದೇಶ ಇರಲಿಲ್ಲ ಎಂದು ವಾದಿಸಿದರು ಕೂಡ ನ್ಯಾಯಾಲಯ ಅವರ ವಾದವನ್ನು ಪರಿಗಣಿಸಲಿಲ್ಲ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth