ರಸ್ತೆ ಕಾಮಗಾರಿ ನಡೆಸುವಂತೆ ಒತ್ತಾಯಿಸಿ ಕನ್ನಾಪುರದಲ್ಲಿ ಪ್ರತಿಭಟನೆ - Mahanayaka

ರಸ್ತೆ ಕಾಮಗಾರಿ ನಡೆಸುವಂತೆ ಒತ್ತಾಯಿಸಿ ಕನ್ನಾಪುರದಲ್ಲಿ ಪ್ರತಿಭಟನೆ

kannapura
07/02/2025

ಮೂಡಿಗೆರೆ: ವಿರಾಜಪೇಟೆ–ಬೈಂದೂರು ರಾಜ್ಯ ಹೆದ್ದಾರಿ (27) ಕನ್ನಾಪುರ ಸರ್ಕಲ್‌ ನಿಂದ ಬೇವಿನಗುಡ್ಡೆವರೆಗೆ 5 ಕಿ.ಮೀ. ರಸ್ತೆ ಅಗಲೀಕರಣದ ಜತೆಗೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಇದಕ್ಕೆ ಸ್ಥಳೀಯರಿಬ್ಬರು ತಕರಾರು ಮಾಡಿದ್ದರಿಂದ ಸುತ್ತಮುತ್ತಲಿನ ಗ್ರಾಮದ ಜನರು ಶುಕ್ರವಾರ ಸ್ಥಳಕ್ಕೆ ಆಗಮಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಪ್ರತಿಭಟನೆ ನಡೆಸಿದರು.

ಕನ್ನಾಪುರ ಸರ್ಕಲ್ ಬಳಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ರಸ್ತೆ ತಮಗೆ ಸೇರಿದ ಕರಾಬ್ ಜಮೀನಿನ ಮೇಲೆ ಹಾದು ಹೋಗಿದೆ. ಹಾಗಾಗಿ ಇಲ್ಲಿ ರಸ್ತೆ ಮಾಡಬಾರದೆಂದು ಸ್ಥಳೀಯ ಇಬ್ಬರು ವ್ಯಕ್ತಿಗಳು ರಸ್ತೆ ಕಾಮಗಾರಿ ನಡೆಸುವ ಮುನ್ನ ಅಧಿಕಾರಿಗಳಿಂದ ಸರ್ವೇ ನಡೆಸಬೇಕು. ಅಲ್ಲಿವರೆಗೆ ಕಾಮಗಾರಿ ನಿಲ್ಲಿಸಬೇಕೆಂದು  ಅಡ್ಡಿ ಪಡಿಸಿದ್ದರಿಂದ ಆ ಸ್ಥಳದಲ್ಲಿ ಕಾಮಗಾರಿ ನಿಲ್ಲಿಸಿ ಬೇರೆ ಕಾಮಗಾರಿ ಮುಂದುವರೆಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಕನ್ನಾಪುರ ಸುತ್ತಮುತ್ತಲಿನ ಗ್ರಾಮದ ನೂರಾರು ಮಂದಿ ಸ್ಥಳಕ್ಕೆ ಆಗಮಿಸಿ,  ಮೂಡಿಗೆರೆಯಿಂದ ಗೆಂಡೇಹಳ್ಳಿ ಮೂಲಕ ಹಾದು ಹೋಗಿರುವ ವಿರಾಜಪೇಟೆ–ಬೈಂದೂರು ರಾಜ್ಯ ಹೆದ್ದಾರಿ (27) ಬ್ರಿಟೀಷರ ಕಾಲದಲ್ಲಿಯೇ ನಿರ್ಮಾಣವಾಗಿತ್ತು. ಈಗ ಕಾಮಗಾರಿ ನಡೆಯುವ ಸಂದರ್ಭದಲ್ಲಿ ತಕರಾರು ಮಾಡುವುದು ಸರಿಯಲ್ಲ. ಯಾರೋ ಇಬ್ಬರಿಗಾಗಿ ರಸ್ತೆ ಬಂದ್ ಮಾಡುವುದಕ್ಕೆ ನಾವು ಬಿಡುವುದಿಲ್ಲ. ರಸ್ತೆ ಕಾಮಗಾರಿ ಮುಂದುವರೆಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ನಂದಿಪುರ ಗ್ರಾ.ಪಂ. ಸದಸ್ಯ ರಘು, ಗಬ್ಬಳ್ಳಿ ಚಂದ್ರೇಗೌಡ, ಜಯರಾಂಗೌಡ, ಪರಮೇಶ್, ಕನ್ನಾಪುರದ ಶಿವೇಗೌಡ, ಸಚಿನ್, ರಂಗಯ್ಯ, ಸುಂದ್ರೇಶ್, ಸಚಿನ್ . ಸುಜಯ್ .ರವಿಗೌಡ ಸಂಗಮಪುರ, ಶಶಿಧರ್ ಮಾಲೂರು, ರಾಜೇಗೌಡ ಎಸ್.ಹೊಸಳ್ಳಿ ಮೂಡಿಗೆರೆ ಠಾಣಾಧಿಕಾರಿ ಶ್ರೀನಾಥ್ ರೆಡ್ಡಿ. ಲೋಕೋಪಯೋಗಿ ಇಂಜಿನಿಯರ್ ಚೆನ್ನಯ್ಯ. ಮತ್ತಿತರರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ