ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಖಂಡಿಸಿ ಉಡುಪಿಯಲ್ಲಿ ಪ್ರತಿಭಟನೆ! - Mahanayaka
11:25 AM Wednesday 5 - February 2025

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಖಂಡಿಸಿ ಉಡುಪಿಯಲ್ಲಿ ಪ್ರತಿಭಟನೆ!

female wrestlers protest
19/05/2023

ಅಂತರ್ ರಾಷ್ಟ್ರೀಯ ಮಹಿಳಾ ಕ್ರೀಡಾ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಖಂಡಿಸಿ ಹಾಗೂ ಬಿಜೆಪಿಯ ಸಂಸದ ಮತ್ತು ಹರಿಯಣದ ಮಂತ್ರಿ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ಒತ್ತಾಯಿಸಿ ಇಂದು ಉಡುಪಿ ಮತ್ತು ಬ್ರಹ್ಮಾವರ  ಸಿಐಟಿಯು ಸಂಚಾಲನ ಸಮಿತಿ, ಉಡುಪಿ ತಾಲೂಕು ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ಪ್ರಾಂತ ಕ್ರಷಿಕೂಲಿಕಾರರ ಸಂಘ ಉಡುಪಿ ತಾಲೂಕು ಸಮಿತಿ ನೇತ್ರತ್ವದಲ್ಲಿ ಉಡುಪಿಯ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಇಂದು  ಪ್ರತಿಭಟನೆ ನಡೆಸಲಾಯಿತು

ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷ ರಾದ ಕೆ ಎಸ್.ವಿಮಲ,ಅಖಿಲ ಭಾರತ ವಕೀಲರ ಸಂಘದ ರಾಜ್ಯ ಮಖಂಡರಾದ ಮುರಳಿಧರ ಪೆಶ್ವ,ಸಿಐಟಯು ಜಿಲ್ಲಾ ಅಧ್ಯಕ್ಷರಾದ ಕೆ.ಶಂಕರ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ್,ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಮುಖಂಡರಾದ ಮಹಾಬಲಹೊಡೆಯರ ಹೋಬಳಿ, ಶಶಿಧರ ಗೊಲ್ಲ,ಚಂದ್ರಶೇಖರ್ ವಿ,ಎಚ್.ನರಸಿಂಹ, ಬಲ್ಲೀಸ್ ಬಾನು

ಸಿಐಟಿಯು ಉಡುಪಿ ಸಂಚಾಲಕರಾದ ಕವಿರಾಜ್ ಎಸ್,ನಳಿನಿ,ಶೇಖರ್ ಬಂಗೇರ, ವಾಮನಪೂಜಾರಿ, ಸೈಯದ್, ಮುರಳಿ, ಸಿಐಟಿಯು ಬ್ರಹ್ಮಾವರ ಸಂಚಾಲನ ಸಮಿತಿ ಸಂಚಾಲಕರಾದ ರಾಮ ಕಾರ್ಕಡ, ಸಹ ಸಂಚಾಲಕರಾದ ಸುಭಾಶ್ ನಾಯಕ್, ಜನವಾದಿ ಮಹಿಳಾ ಸಂಘಟನೆ ಉಡುಪಿ ಜಿಲ್ಲಾ ಅಧ್ಯಕ್ಷರಾದ ಸರೋಜಾ, ಕಾರ್ಯದರ್ಶಿ ಶೀಲಾವತಿ, ಪ್ರಮೀಳಾ ಕಾಪು ಕರ್ನಾಟಕ ಪ್ರಾಂತ ಕೃಷಿಕೂಲಿಕಾರ ಸಂಘದ ಉಡುಪಿ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್ ಕೋಣಿ ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ