ಔರಂಗಜೇಬ್ ಸಮಾಧಿಯನ್ನು ತೆರವುಗೊಳಿಸಬೇಕೆಂದು ಪ್ರತಿಭಟನೆ: ಬಂಧಿತ ಸಂಘಪರಿವಾರದ ಎಂಟು ಮಂದಿಗೆ ಜಾಮೀನು - Mahanayaka

ಔರಂಗಜೇಬ್ ಸಮಾಧಿಯನ್ನು ತೆರವುಗೊಳಿಸಬೇಕೆಂದು ಪ್ರತಿಭಟನೆ: ಬಂಧಿತ ಸಂಘಪರಿವಾರದ ಎಂಟು ಮಂದಿಗೆ ಜಾಮೀನು

20/03/2025


Provided by

ಔರಂಗಜೇಬ್ ಸಮಾಧಿಯನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ನಡೆಸಲಾದ ಪ್ರತಿಭಟನೆಗೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಇವರ ಪೈಕಿ ಎಂಟು ಮಂದಿಗೆ ಜಾಮೀನು ಲಭಿಸಿದೆ. ನಾಗಪುರ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಇವರಿಗೆ ಜಾಮೀನು ನೀಡಿದೆ.


Provided by

ಈ ಮೊದಲು ಮೈನಾರಿಟಿ ಡೆಮೊಕ್ರೆಟಿಕ್ ಪಾರ್ಟಿಯ ಮುಖಂಡ ನಾಗಪುರ ಸಂಘರ್ಷಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದರು. ಅವರಿಗೆ ಇನ್ನೂ ಜಾಮೀನು ಲಭಿಸಿಲ್ಲ.

ಇದೇ ವೇಳೆ ಔರಂಗಜೇಬ್ ಗೆ ಈಗ ಯಾವ ಮಹತ್ವವೂ ಇಲ್ಲ ಎಂದು ಆರ್ ಎಸ್ ಎಸ್ ರಾಷ್ಟ್ರೀಯ ಪ್ರಚಾರಕ್ ಹೊಣೆಯನ್ನು ಹೊತ್ತಿರುವ ಸುನಿಲ್ ಅಂಬೇಡ್ಕರ್ ಹೇಳಿದ್ದಾರೆ. ಔರಂಗ ಜೇಬ್ ಸಮಾಧಿಯನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ನಡೆದಿರುವ ಪ್ರತಿಭಟನೆ ಮತ್ತು ಸಂಘರ್ಷವನ್ನು ನಾನು ಖಂಡಿಸುವುದಾಗಿ ಅವರು ಹೇಳಿದ್ದಾರೆ.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ