11:24 AM Wednesday 12 - March 2025

ಸಮಾಜ ಸೇವೆಯಲ್ಲಿ ತೊಡಗುವವರಿಗೆ 25,000 ರೂ.ವರೆಗೆ ಪ್ರೋತ್ಸಾಹ ಧನ | ಈಗಲೇ ಅರ್ಜಿ ಸಲ್ಲಿಸಿ

23/11/2020

ಬೆಂಗಳೂರು: ನೆಹರು ಯುವ ಕೇಂದ್ರ ಸಂಘಟನೆ ವತಿಯಿಂದ ಸಮಾಜ ಸೇವೆ ಕ್ಷೇತ್ರದಲ್ಲಿ ತೊಡಗಿರುವ ಅತ್ಯತ್ತುಮ ಸಾಧನೆ ಮಾಡಿರುವ ಕ್ಲಬ್ ಗಳಿಗೆ ರೂ. 25,000/- ಪ್ರೋತ್ಸಾಹ ಧನ ನೀಡಿ ಜಿಲ್ಲಾ ಮಟ್ಟದ ಯುವ ಉತ್ತಮ ಕ್ಲಬ್ ಎಂದು ಪರಿಗಣಿಸಿ ಪ್ರಮಾಣ ಪತ್ತ ನೀಡಲಾಗುತ್ತಿದ್ದು, ಅರ್ಹ ಕ್ಲಬ್ ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕ್ಲಬ್ ಗಳು ನೆಹರು ಯುವ ಕೇಂದ್ರದೊಡನೆ ನೋಂದಣಿಯಾಗಿರಬೇಕು. ಕರ್ನಾಟಕ ಸೊಸೈಟಿ ರಿಜಸ್ಟೇಷನ್ ಆಕ್ಟ್ ನಲ್ಲಿ ನೋಂದಣಿ ಹೊಂದಿರಬೇಕು ಹಾಗೂ 2019-2020 ನೇ ಸಾಲಿನ ಆಡಿಟ್ ವರದಿಯನ್ನು ಸಲ್ಲಿಸಿರಬೇಕು.

ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಟ್ಟದ ಯುವ ಸಮನ್ವಯಾಧಿಕಾರಿಗಳಾದ ವಿನಯ್ ಕುಮಾರ್ ರವರ ಮೊಬೈಲ್ ಸಂಖ್ಯೆ : 9805892503 ನ್ನು ಅಥವಾ ನೆಹರು ಯುವ ಕೇಂದ್ರೆ ಕಚೇರಿಯನ್ನು ಸಂರ್ಪಕಿಸಬಹುದಾಗಿದೆ ಎಂದು ಜಿಲ್ಲಾ ಮಟ್ಟದ ಯುವ ಸಮನ್ವಯಾಧಿಕಾರಿಗಳಾದ ವಿನಯ್ ಕುಮಾರ್ ರವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಇತ್ತೀಚಿನ ಸುದ್ದಿ

Exit mobile version