ದಲಿತ ಯುವಕನಿಗೆ ಹಲ್ಲೆ ಮಾಡಿ, ಮೂತ್ರ ಕುಡಿಸಿದ ಪಿಎಸ್ ಐ ಅರ್ಜುನ್ ನನ್ನು ಬಂಧಿಸಬೇಕು | ಕಾಂಗ್ರೆಸ್ ಒತ್ತಾಯ

congress
25/05/2021

ಬೆಂಗಳೂರು:  ದಲಿತ ಯುವಕನ ಮೇಲೆ ಅಮಾನವೀಯ ದೌರ್ಜನ್ಯ ನಡೆಸಿರುವ ಚಿಕ್ಕಮಗಳೂರು ಜಿಲ್ಲೆ ಗೋಣಿಬೀಡು ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅರ್ಜನ್ ಅವರನ್ನು ಬಂಧಿಸಬೇಕು, ಪ್ರಕರಣದ ಹೊಣೆಗಾರಿಕೆಗಾಗಿ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಅವರನ್ನು ಅಮಾನತು ಮಾಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್, ರಾಜ್ಯ ಸಭಾ ಸದಸ್ಯರಾದ ಎಲ್.ಹನುಮಂತಯ್ಯ, ಡಾ.ಸೈಯದ್ ನಾಸೀರ್ ಹುಸೇನ್, ವಿಧಾನ ಪರಿಷತ್ ಸದಸ್ಯರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದು, ಮೂಡಿಗೆರೆ ತಾಲ್ಲೂಕಿನ ಕೆ.ಎಲ್.ಪುನೀತ್ ಎಂವ ಯುವಕನಿಗೆ ಚಿತ್ರಹಿಂಸೆ ನೀಡಿ, ಬಾಯಾರಿಕೆ ಎಂದು ನೀರು ಕೇಳಿದಾಗ ಮೂತ್ರ ಕುಡಿಸಿ ನೆಲದ ಮೇಲೆ ಬಿದ್ದ ಮೂತ್ರವನ್ನು ನಾಲಿಗೆಯಿಂದ ನೆಕ್ಕುವಂತೆ ಮಾಡಿ ಚಿತ್ರ ಹಿಂಸೆ ನೀಡಿ ಅಮಾನುಷ ಕೃತ್ಯ ಎಸಗಲಾಗಿದೆ ಎಂದು ಹೇಳಿದ್ದಾರೆ.

ಈ ಘಟನೆ ನಡೆದು 10 ದಿನ ಕಳೆದರು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಖಂಡನೀಯ. ತಪ್ಪಿತಸ್ಥ ಅಧಿಕಾರಿಯ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಸರಿಯಲ್ಲ. ಕೂಡಲೇ ಸಬ್ ಇನ್ಸಪೆಕ್ಟರ್ ಅವರನ್ನು ಬಂಧಿಸಬೇಕು ಮತ್ತು ಸೇವೆಯಿಂದ ವಜಾ ಮಾಡಬೇಕು. ಘಟನೆಯ ಮಾಹಿತಿ ಇದ್ದರೂ ಮೌನವಾಗಿದ್ದ ಎಸ್ ಪಿ ಅವರನ್ನ ಅಮಾನತು ಮಾಡಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಸಬ್ ಇನ್ಸ್ ಪೆಕ್ಟರ್ ಅರ್ಜುನ್ ಅವರನ್ನು 10 ದಿನಗಳ ಕಾಲ ಅಮಾನತಿನಲ್ಲಿಟ್ಟು, ನಂತರ ಉಡುಪಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಇದು ಸರ್ಕಾರದ ಬೇಜವಾಬ್ದಾರಿತನಾಗಿದೆ ಎಂದು ಆರೋಪಿಸಲಾಗಿದೆ. ಸರ್ಕಾರ ಕೂಡಲೇ ವರದಿ ಪಡೆದ ಪಿಎಸ್‌ ಐ ಮತ್ತು ಆ ಸಂದರ್ಭದಲ್ಲಿ ಅಲ್ಲಿದ್ದ ಪೊಲೀಸ್ ಕಾನ್ಸ್ ಟೆಬಲ್ ಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಲಾಗಿದೆ.

ಇತ್ತೀಚಿನ ಸುದ್ದಿ

Exit mobile version