ಪಿಎಸ್ ​ಐ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ: ರಚನಾ ಹನುಮಂತ ರಾಜ್ಯಕ್ಕೆ ಪ್ರಥಮ - Mahanayaka
8:42 AM Wednesday 11 - December 2024

ಪಿಎಸ್ ​ಐ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ: ರಚನಾ ಹನುಮಂತ ರಾಜ್ಯಕ್ಕೆ ಪ್ರಥಮ

psi
21/01/2022

ವಿಜಯಪುರ: ಕರ್ನಾಟಕ ಪೊಲೀಸ್ ಇಲಾಖೆ ಇತ್ತೀಚಿಗೆ ನಡೆಸಿದ ಪ್ರೊಬೇಷನರಿ ಪೊಲೀಸ್ ಸಬ್ ಇನ್ಸ್​ಪೆಕ್ಟರ್ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯ ಮಹಿಳಾ ವಿಭಾಗದಲ್ಲಿ ಜಿಲ್ಲೆಯ ರಚನಾ ಹನುಮಂತ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿ ತರಬೇತಿಗೆ ಆಯ್ಕೆಯಾಗಿದ್ದಾರೆ.

ಎರಡು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಒಟ್ಟು 153.25 ಅಂಕ ಗಳಿಸಿ ಅವರು ಜನರಲ್ ಕೆಟಗೇರಿಯಲ್ಲಿ ಆಯ್ಕೆಯಾಗಿದ್ದಾರೆ. ಮಹಿಳಾ ವಿಭಾಗದಲ್ಲಿ ಪೊಲೀಸ್ ಸಬ್ ಇನ್ಸ್​ಪೆಕ್ಟರ್ ಹುದ್ದೆಗೆ ರಾಜ್ಯದ 27 ಮಹಿಳೆಯರು ನೇಮಕಾತಿಯಾಗಿದ್ದಾರೆ.

ಮೂಲತಃ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ರಚನಾ, ಇದೇ ಮೊದಲ ಬಾರಿ ಪೊಲೀಸ್ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದರು. ಮೊದಲ ಪ್ರಯತ್ನದಲ್ಲೇ ಮಹಿಳಾ ಸಬ್ ಇನ್ಸ್​ಪೆಕ್ಟರ್ ಪರೀಕ್ಷೆ ಪಾಸ್​ ಮಾಡುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕ್ರೈಸ್ತ ಧಾರ್ಮಿಕ ಸಮಾರಂಭದಲ್ಲಿ ಕಾಲ್ತುಳಿತ; 29 ಮಂದಿ ಸಾವು

ಚಲಿಸುತ್ತಿದ್ದ ಬಿಎಂಟಿಸಿ ಬಸ್ ​ನಲ್ಲಿ ಆಕಸ್ಮಿಕ ಬೆಂಕಿ

ಲಾಹೋರ್ ಮಾರುಕಟ್ಟೆಯಲ್ಲಿ ಭಾರೀ ಸ್ಫೋಟ; 3 ಸಾವು, 20 ಮಂದಿಗೆ ಗಾಯ

ಲಂಚ ಸ್ವೀಕರಿಸುತ್ತಿದ್ದ ವೇಳೆ ಪಿಡಿಓ ಬಂಧನ

2022ರ ಆಸ್ಕರ್ ಪ್ರಶಸ್ತಿಗೆ ತಮಿಳು ಚಿತ್ರ ‘ಜೈ ಭೀಮ್’ ಆಯ್ಕೆ

 

ಇತ್ತೀಚಿನ ಸುದ್ದಿ