ಪಿಎಸ್‌ ಐ ನೇಮಕಾತಿಯಲ್ಲಿ ವಂಚನೆ: ಅಭ್ಯರ್ಥಿಗಳಿಂದ ಬೃಹತ್‌ ಪ್ರತಿಭಟನೆ - Mahanayaka

ಪಿಎಸ್‌ ಐ ನೇಮಕಾತಿಯಲ್ಲಿ ವಂಚನೆ: ಅಭ್ಯರ್ಥಿಗಳಿಂದ ಬೃಹತ್‌ ಪ್ರತಿಭಟನೆ

vanchane
04/02/2022

ಕಲಬುರಗಿ: ಪಿಎಸ್‍ ಐ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ‘371-ಜೆ’ ಮೀಸಲಾತಿಯಿಂದ ವಂಚಿಸಲಾಗಿದೆ. ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಹಲವರು ಅವಕಾಶ ವಂಚಿತರಾಗಿದ್ದಾರೆ. ಈ ಪಟ್ಟಿಯನ್ನು ರದ್ದುಪಡಿಸಿ, ಹೊಸ ಪಟ್ಟಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಹಲವು ಅಭ್ಯರ್ಥಿಗಳು ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಸಮಾವೇಶಗೊಂಡ ಯುವಕ, ಯುವತಿಯರು ಸರ್ಕಾರದ ನಿಲುವಿನ ವಿರುದ್ಧ ಘೋಷಣೆ ಕೂಗಿದರು. ವೃತ್ತದಿಂದ ಮೆರವಣಿಗೆ ಆರಂಭಿಸಿ ಜಿಲ್ಲಾಧಿಕಾರಿ ಕಚೇರಿ ತಲುಪಿದರು. ಅಲ್ಲಿಯೂ ಕೆಲಕಾಲ ಧರಣಿ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಘೋಷಣೆ ಕೂಗಿದರು.

545 ಪಿಎಸ್‍ ಐ ಹುದ್ದೆಗಳ ನೇಮಕಾತಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಕಲ್ಯಾಣ ಭಾಗದ ಅಭ್ಯರ್ಥಿಗಳಿಗೆ ಸಿಗಬೇಕಾದ 371-ಜೆ ವಿಧಿಯ ಮೀಸಲಾತಿ ಕಸಿದುಕೊಳ್ಳಲಾಗಿದೆ. ಈ ಭಾಗದ ಉತ್ತಮ ಅಂಕ ಪಡೆದ ಅಭ್ಯರ್ಥಿಗಳನ್ನು ರಾಜ್ಯದ ಸಾಮಾನ್ಯ ಆಯ್ಕೆ ಪಟ್ಟಿಯಲ್ಲಿ ಪರಿಗಣಿಸದೇ ಕಲ್ಯಾಣ ಕರ್ನಾಟಕ ಮೀಸಲಾತಿ ಪಟ್ಟಿಯಲ್ಲೇ ಉಳಿಸಲಾಗಿದೆ. ಮೊದಲು ಮೆರಿಟ್ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ನಂತರ ಈ ಭಾಗಕ್ಕೆ ಸಿಕ್ಕ ಮೀಸಲಾತಿ ಅಡಿ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.

ಪಟ್ಟಿಯಿಂದ ಈ ಭಾಗದ 77 ಅಭ್ಯರ್ಥಿಗಳು ಉದ್ಯೋಗ ವಂಚಿತರಾಗುತ್ತಾರೆ. ಈ ಭಾಗದವರೊಬ್ಬರು ರಾಜ್ಯಕ್ಕೆ ಎರಡನೇ ರ‍್ಯಾಂಕ್‌ ಪಡೆದಿದ್ದಾರೆ. ಅವರನ್ನು ಸಾಮಾನ್ಯ ಪಟ್ಟಿಯಲ್ಲಿ ಪರಿಗಣಿಸದೇ ಕಲ್ಯಾಣ ಕರ್ನಾಟಕ ಮೀಸಲಾತಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಹಾಗಿದ್ದರೆ ಮೀಸಲಾತಿಯ ಪ್ರಯೋಜನ ಹೇಗಾಗುತ್ತದೆ? ಕೂಡಲೇ ಈ ತಪ್ಪನ್ನು ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಈ ರೀತಿ ಪದೇಪದೇ ಅನ್ಯಾಯವಾಗುತ್ತಿದೆ. ಆದರೂ ಜಿಲ್ಲೆಯ ಸಂಸದ, ಶಾಸಕರು, ವಿಧಾನ ಪರಿಷತ್ ಸದಸ್ಯರು ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಸಾಕಷ್ಟು ಹೋರಾಟದ ನಂತರ 371ಜೆ ಮೀಸಲಾತಿ ಸಿಕ್ಕಿದೆ. ಆದರೆ, ಅದನ್ನು ಸರಿಯಾಗಿ ಬಳಸಿಕೊಳ್ಳುವ ಪರಿಜ್ಞಾನವೂ ನಾಯಕರಿಗೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೃಹ ಸಚಿವರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ ಅವರಿಗೆ ಸಲ್ಲಿಸಿದರು. ಅಲ್ಲಿಂದ ಕೆಕೆಆರ್‌ಡಿಬಿ ಕಚೇರಿಯವರೆಗೆ ಮೆರವಣಿಗೆ ನಡೆಸಿ, ಅಧ್ಯಕ್ಷ ದತ್ತಾತ್ರೇಯ ಪಾಟೀಲ ಅವರಿಗೂ ಮನವಿ ನೀಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

 ನಿರ್ಮಾಣ ಹಂತದ ಕಟ್ಟಡ ಕುಸಿತ: 6 ಮಂದಿ ಬಡ ಕಾರ್ಮಿಕರು ಬಲಿ

ಬಿಎಸ್ ಪಿ ಮಾತ್ರ ದೇಶಕ್ಕೆ ಅಚ್ಛೇದಿನ್ ತರಬಲ್ಲ ಪಕ್ಷ: ಮಾಯಾವತಿ

ನಾಪತ್ತೆಯಾಗಿದ್ದ ಎಎಸ್‌ ಐ ನದಿಯಲ್ಲಿ ಶವವಾಗಿ ಪತ್ತೆ

ಶಾಲೆಗೆ ಹೋಗಿದ್ದ ಶಿಕ್ಷಕ ರಸ್ತೆ ಬದಿ ಅನುಮಾನಾಸ್ಪದ ಸಾವು

ಹಿಂದಿಯ ಖ್ಯಾತ ಕಿರುತೆರೆ ನಟಿಯ ಮೇಲೆ ಅತ್ಯಾಚಾರ: ದೂರು ದಾಖಲು

 

ಇತ್ತೀಚಿನ ಸುದ್ದಿ