ಡಾ.ವೀರೇಂದ್ರ ಹೆಗಡೆ, ಪಿ.ಟಿ.ಉಷಾ, ಇಳಯರಾಜಾ ರಾಜ್ಯಸಭೆಗೆ ನಾಮನಿರ್ದೇಶನ - Mahanayaka
6:04 AM Saturday 21 - September 2024

ಡಾ.ವೀರೇಂದ್ರ ಹೆಗಡೆ, ಪಿ.ಟಿ.ಉಷಾ, ಇಳಯರಾಜಾ ರಾಜ್ಯಸಭೆಗೆ ನಾಮನಿರ್ದೇಶನ

nominated for rajya sabha
06/07/2022

ನವದೆಹಲಿ: ದಕ್ಷಿಣ ಭಾರತದ ಜನಪ್ರಿಯ ಸಂಗೀತ ಸಂಯೋಜಕ ಇಳಯರಾಜಾ ಮತ್ತು ಮಾಜಿ ಒಲಿಂಪಿಕ್ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಪಿ.ಟಿ.ಉಷಾ ಹಾಗೂ ಧರ್ಮಸ್ಧಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಸೇರಿದಂತೆ ನಾಲ್ವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ.

ವೀರೇಂದ್ರ ಹೆಗ್ಗಡೆಯವರು ಅಸಾಧಾರಣ ಸಮುದಾಯ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರು ಆರೋಗ್ಯ, ಶಿಕ್ಷಣ ಮತ್ತು ಸಂಸ್ಕೃತಿಯಲ್ಲಿ ಮಾಡುತ್ತಿರುವ ಮಹತ್ಕಾರ್ಯಕ್ಕೆ ಸಾಕ್ಷಿಯಾಗುವ ಅವಕಾಶ ನನಗೆ ದೊರೆತಿದೆ. ಅವರು ಖಂಡಿತವಾಗಿಯೂ ಸಂಸದೀಯ ಕಾರ್ಯಕಲಾಪಗಳನ್ನು ಶ್ರೀಮಂತಗೊಳಿಸುತ್ತಾರೆ ಎಂದಿದ್ದಾರೆ.

ಇಳಯರಾಜಾ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ,  ಇಳಯರಾಜಾ ಜೀ ಅವರ ಸೃಜನಶೀಲ ಪ್ರತಿಭೆ ತಲೆಮಾರುಗಳಾದ್ಯಂತ ಜನರನ್ನು ಮಂತ್ರಮುಗ್ಧರನ್ನಾಗಿಸಿದೆ. ಅವರ ಕೃತಿಗಳು ಅನೇಕ ಭಾವನೆಗಳನ್ನು ಸುಂದರವಾಗಿ ಪ್ರತಿಬಿಂಬಿಸುತ್ತವೆ. ಅಷ್ಟೇ ಸ್ಪೂರ್ತಿದಾಯಕವಾದುದು ಅವರ ಜೀವನ ಪಯಣ- ಅವರು ವಿನಮ್ರ ಹಿನ್ನೆಲೆಯಿಂದ ಮೇಲೆದ್ದು ಬಹಳಷ್ಟು ಸಾಧಿಸಿದರು. ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದಕ್ಕೆ ಸಂತೋಷವಾಗಿದೆ  ಎಂದಿದ್ದಾರೆ.


Provided by

ಪಿ.ಟಿ. ಉಷಾ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ,  ಉಷಾ ಜಿ ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿಯಾಗಿದ್ದಾರೆ. ಕ್ರೀಡೆಗಳಲ್ಲಿ ಇವರ ಸಾಧನೆಗಳು ವ್ಯಾಪಕವಾಗಿ ತಿಳಿದಿವೆ.  ಕಳೆದ ಹಲವಾರು ವರ್ಷಗಳಲ್ಲಿ ಉದಯೋನ್ಮುಖ ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡುವ ಅವರ ಕೆಲಸವು ಅಷ್ಟೇ ಪ್ರಶಂಸನೀಯವಾಗಿದೆ. ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ