ಪಬ್ ಜೀಯಲ್ಲಿ ಲವ್: ಪ್ರಿಯಕರನನ್ನು ಭೇಟಿಯಾಗಲು ಹೊರಟವಳಿಗೆಕಾದಿತ್ತು ಬಿಗ್ ಶಾಕ್!
ಲಕ್ನೋ: ಪಬ್ ಜೀಯನ್ನು ಬ್ಯಾನ್ ಮಾಡಿದ್ದೇವೆ ಅನ್ನುತ್ತಲೇ ಸಾಕಷ್ಟು ಪ್ರಚಾರಗಳು ನಡೆಯುತ್ತಿರುವುದರ ನಡುವೆಯೇ ವಿವಾಹಿತ ಮಹಿಳೆಯೋರ್ವಳು ಪಬ್ ಜೀ ಆಡುತ್ತಾ, ಪ್ರೀತಿಯಲ್ಲಿ ಬಿದ್ದಿದ್ದು, ತನ್ನ ಪ್ರಿಯಕರನ್ನು ಹುಡುಕುತ್ತಾ, ಆತನ ಊರಿಗೆ ತೆರಳಿದ್ದಾಳೆ.
ಮಹಿಳೆಗೆ ಪಬ್ ಜೀಯಲ್ಲಿ ವಾರಣಾಸಿ ಮೂಲದ ಯುವಕನೋರ್ವನ ಪರಿಚಯವಾಗಿದೆ. ಈ ಪರಿಚಯ ಗಾಢವಾಗುತ್ತಾ ಹೋಗಿದೆ. ಇಬ್ಬರು ಕೂಡ ಪರಸ್ಪರ ಮೊಬೈಲ್ ನಂಬರ್ ಕೂಡ ವಿನಿಮಯ ಮಾಡಿಕೊಂಡಿದ್ದಾರೆ.
ಈ ನಡುವೆ ಪ್ರಿಯಕರನನ್ನು ಭೇಟಿಯಾಗಲೇ ಬೇಕು ಎಂದು ನಿರ್ಧರಿಸಿದ ಮಹಿಳೆ ಹಿಮಾಚಲ ಪ್ರದೇಶದ ಕಂಗ್ರಾದಿಂದ ನೇರವಾಗಿ ಉತ್ತರಪ್ರದೇಶದ ವಾರಣಾಸಿಗೆ ತೆರಳಿದ್ದಾಳೆ. ಇತ್ತ ವಿವಾಹಿತೆಯ ಮನೆಯವರು ಮಹಿಳೆ ಕಾಣದಿರುವುದರಿಂದ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.
ತನ್ನ ಪ್ರಿಯಕರ ನನ್ನು ನೋಡಲು ಆತುರಾತುರವಾಗಿ ಬಂದಿದ್ದ ಮಹಿಳೆ ಶಾಕ್ ಗೊಳಗಾಗಿದ್ದಾಳೆ. ತಾನು ಪ್ರಿಯಕರ ಯುವಕ ಎಂದು ಅಂದುಕೊಂಡು ಬಂದಿದ್ದರೆ, ಅಲ್ಲೊಬ್ಬ ದ್ವಿತೀಯ ಪಿಯುಸಿಯ ಬಾಲಕ ನಾನೇ ನಿನ್ನ ಪ್ರಿಯಕರ ಎಂದು ಬಂದಿದ್ದಾನೆ.
ಇದನ್ನುನೋಡಿ ನಿರಾಸೆಗೊಂಡ ಮಹಿಳೆ ತನ್ನ ಪಾಲಕರಿಗೆ ಕರೆ ಮಾಡಿ ತನ್ನನ್ನು ಕರೆದುಕೊಂಡು ಹೋಗುವಂತೆ ಮನವಿ ಮಾಡಿದ್ದಾಳೆ. ಅವರು ವಾರಣಾಸಿ ಪೊಲೀಸರಿಗೆ ವಿಚಾರ ತಿಳಿಸಿದ್ದು, ಆಕೆಯನ್ನು ಮರಳಿ ಹಿಮಾಚಲ ಪ್ರದೇಶಕ್ಕೆ ಪೊಲೀಸರು ಕಳುಹಿಸಿಕೊಟ್ಟಿದ್ದಾರೆ.
ಆನ್ ಲೈನ್ ಎನ್ನುದು ಮನುಷ್ಯನನ್ನು ಬೆಳೆಸಲು ಇರುವುದು. ಆದರೆ ಅದು ಕೆಡಿಸುತ್ತಿದೆ. ಆನ್ ಲೈನ್ ನ ಸಂಪರ್ಕದಿಂದಾಗಿ ಇಂದು ಎಂತೆಂತಹ ಅನಾಹುತಗಳು ಸಂಭವಿಸುತ್ತಿವೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ.