ಇದು ಜನಾಕ್ರೋಶ ಹೋರಾಟ ಅಲ್ಲ, ಬಿಜೆಪಿ ಆಕ್ರೋಶ ಅಷ್ಟೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಇಲ್ಲ, ಬದಲಾಗಿ ಬಿಜೆಪಿ ಆಕ್ರೋಶವಷ್ಟೇ ಇದೆ ಎಂದು ಬಿಜೆಪಿಯ ಜನಾಕ್ರೋಶ ಪ್ರತಿಭಟನೆಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಕಳೆದ ಎರಡು ವರ್ಷಗಳ ಉತ್ತಮ ಆಡಳಿತದ ಬಗ್ಗೆ ಬಿಜೆಪಿಗೆ ತಡೆದುಕೊಳ್ಳೋದಕ್ಕೆ ಆಗ್ತಿಲ್ಲ ಎಂದು ಕಿಡಿಕಾರಿದರು.
ರಾಜ್ಯದಲ್ಲಿಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದಿಲ್ಲ ಎಂದು ಬಿಜೆಪಿ ನಾಯಕರು ಊಹೆ ಮಾಡಿದ್ದರು. ಆದರೆ ಐದು ಗ್ಯಾರಂಟಿ ಜಾರಿ ಮಾಡಿ ಜನರಿಗೆ ಕಾಂಗ್ರೆಸ್ ಸಮಾಧಾನ ಕೊಟ್ಟಿದೆ. ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಕೂಡಾ ಜನಮನ್ನಣೆಗೆ ಪಾತ್ರವಾಗಿದೆ. ಹೀಗಾಗಿ ಏನಾದರೂ ಮಾಡಬೇಕು ಎಂಬ ಉದ್ದೇಶದಿಂದ ಹೀಗೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಸರ್ಕಾರದ ವಿರುದ್ಧ ಯಾವ ಜನರು ಆಕ್ರೋಶ ಮಾಡಿದ್ದರು? ಇದು ಕೇವಲ ಬಿಜೆಪಿಯ ಆಕ್ರೋಶ ಅಷ್ಟೇ. ಜನಾಕ್ರೋಶ ಅಂದರೆ ಜನರು ಬೀದಿಯಲ್ಲಿ ಬೈಯಬೇಕು. ಆದರೆ ಯಾರು ಹಾಗೆ ಮಾತನಾಡಿದ್ದಾರೆ? ಬಿಜೆಪಿ ಪಕ್ಷದವರು ಸೇರಿ ಆಕ್ರೋಶ ಮಾಡುವುದಲ್ಲ ಎಂದು ಜನಾಕ್ರೋಶ ಹೋರಾಟಕ್ಕೆ ತಿರುಗೇಟು ನೀಡಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD