ಸಾರ್ವಜನಿಕರೇ ಎಚ್ಚರವಾಗಿರಿ… | ಕೆವೈಸಿ ಅಪ್ ಡೇಟ್ ಮಾಡುವ ನೆಪದಲ್ಲಿ 1.06 ದೋಚಿದ ಅಪರಿಚಿತ
ಕೆವೈಸಿ ಅಪ್ ಡೇಟ್ ಮಾಡುವ ನೆಪದಲ್ಲಿ ಕರೆ ಮಾಡಿದ ಅಪರಿಚಿತ ವ್ಯಕ್ತಿಯೋರ್ವ ನಿವೃತ್ತ ಬ್ಯಾಂಕ್ ಉದ್ಯೋಗಿಯ ಖಾತೆಯಿಂದ 1.06 ಲಕ್ಷ ರೂ.ಗಳನ್ನು ದೋಚಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಮಣಿಪಾಲ ಅಲೆವೂರು ರಸ್ತೆಯ ಎ.ಎಲ್.ಎನ್ ರಾವ್ ಲೇಔಟ್ ನಿವಾಸಿ ನಿವೃತ್ತ ಬ್ಯಾಂಕ್ ಉದ್ಯೋಗಿ 79ವರ್ಷದ ಸ್ಟ್ಯಾನ್ಲಿ .ಪಿ. ಕುಂದರ್ ಹಣ ಕಳೆದುಕೊಂಡ ವ್ಯಕ್ತಿ.
ಇವರ ಮೊಬೈಲ್ ಗೆ ಕೆವೈಸಿ ಅಪ್ ಡೇಟ್ ಮಾಡುವ ಸಲುವಾಗಿ ಬಂದ ಸಂದೇಶ ಬಂದಿದ್ದು, ಅದರಲ್ಲಿದ್ದ ನಂಬರ್ ಗೆ ಕರೆ ಮಾಡಿದ್ದರು. ಬಳಿಕ ಫೆ.2 ರಂದು ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಸ್ಟ್ಯಾನಿ ಪಿ. ಕುಂದರ್ ಅವರ ಬ್ಯಾಂಕ್ ಖಾತೆಯ ವಿವರಗಳನ್ನು ಹಾಗೂ ಒಟಿಪಿಯನ್ನು ಪಡೆದುಕೊಂಡು, ಅವರ ಖಾತೆಯಿಂದ ಹಂತ ಹಂತವಾಗಿ 1,06,826 ರೂ. ಹಣವನ್ನು ಆನ್ ಮೂಲಕ ದೋಚಿದ್ದಾರೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw