ಪಿಯುಸಿ ಪಾಸ್ ಆದವರಿಗೆ 25 ಸಾವಿರ, ಪದವಿ ಮುಗಿಸಿದವರಿಗೆ 50 ಸಾವಿರ ರೂ ಧನ ಸಹಾಯ ಘೋಷಿಸಿದ ಈ ಸರ್ಕಾರ
ಪಾಟ್ನಾ: ಆರ್ಥಿಕವಾಗಿ ಹಿಂದುಳಿದಿರುವ ಪಿಯುಸಿ ತೇರ್ಗಡೆ ಹೊಂದಿದ ಅವಿವಾಹಿತ ಹೆಣ್ಣು ಮಕ್ಕಳಿಗೆ ಮತ್ತು ಡಿಗ್ರಿ ತೇರ್ಗಡೆ ಹೊಂದಿರುವ ವಿವಾಹಿತ ಮತ್ತು ಅವಿವಾಹಿತ ಹೆಣ್ಣು ಮಕ್ಕಳಿಗೆ ಭರ್ಜರಿ ಆರ್ಥಿಕ ನೆರವು ನೀಡಲು ಬಿಹಾರದ ಸಿಎಂ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಮುಂದಾಗಿದೆ.
ಅವಿವಾಹಿತ ಸ್ತ್ರೀಯರಿಗೆ ಆರ್ಥಿಕ ನೆರವು, ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಸೇರಿದಂತೆ 20 ಅಂಶಗಳ ಯೋಜನೆ ಜಾರಿ ಮಾಡಲು ಬಿಹಾರ ಸಿಎಂ ನಿತೀಶ್ ಕುಮಾರ್ ನಿರ್ಧರಿಸಿದ್ದಾರೆ. ಪಿಯುಸಿ ತೇರ್ಗಡೆ ಮಾಡಿರುವ ಅವಿವಾಹಿತ ಹೆಣ್ಣು ಮಕ್ಕಳಿಗೆ 25 ಸಾವಿರ ರೂ ಹಾಗೂ ಪದವಿ ಮುಗಿಸಿರುವ ಅವಿವಾಹಿತ ಹಾಗೂ ವಿವಾಹಿತ ಹೆಣ್ಣು ಮಕ್ಕಳಿಗೆ 50 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಲು ಸರ್ಕಾರ ಮುಂದಾಗಿದೆ.
ನೀಡುವುದಾಗಿ ಕಳೆದ ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ ಎನ್ ಡಿಎ ಮೈತ್ರಿಕೂಟ ಈ ಭರವಸೆ ನೀಡಿತ್ತು. ಈ ಭರವಸೆಯನ್ನು ಈಡೇರಿಸಲು ಇದೀಗ ಅಧಿಕೃತವಾಗಿ ಈ ಯೋಜನೆಯನ್ನು ಘೋಷಿಸಿದೆ.
ರಾಜ್ಯದಲ್ಲಿ ಫೆಬ್ರವರಿ 1ರಂದು ಪಿಯುಸಿ ಪರೀಕ್ಷೆ ಆರಂಭವಾಗಿದೆ. ಇದರಲ್ಲಿ ತೇರ್ಗಡೆಯಾದ ಹೆಣ್ಣು ಮಕ್ಕಳಿಗೆ ತಲಾ 25 ಸಾವಿರ ರೂಗಳನ್ನು ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಾಕಲು ನಿತೀಶ್ ಕುಮಾರ್ ನೇತೃತ್ವದ ಎನ್ ಡಿಎ ಸರ್ಕಾರ ತೀರ್ಮಾನಿಸಿದೆ.