ಮದ್ಯದಂಗಡಿ ಮೇಲೆ ತಮಿಳುನಾಡು ಪೊಲೀಸರ ಅನಧಿಕೃತ ದಾಳಿ: ಪುದುಚೇರಿ ಪೊಲೀಸರ ಆಕ್ಷೇಪ
ತಮಿಳುನಾಡು ಮತ್ತು ಪುದುಚೇರಿ ಗಡಿಯಲ್ಲಿರುವ ಮಧುಕ್ಕರೈನಲ್ಲಿರುವ ವೈನ್ ಶಾಪ್ ಮೇಲೆ ತಮಿಳುನಾಡು ಪೊಲೀಸರು ಶನಿವಾರ ನಡೆಸಿದ ದಾಳಿಯನ್ನು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ಪೊಲೀಸರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪೆನ್ನೈ ಸೇತುವೆಯ ಚೆಕ್ ಪಾಯಿಂಟ್ ನಲ್ಲಿ ಬೀಡುಬಿಟ್ಟಿದ್ದ ತಮಿಳುನಾಡು ಪೊಲೀಸರು ರಾಜ್ಯಕ್ಕೆ 10 ಮದ್ಯದ ಪ್ಯಾಕೆಟ್ ಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ತಡೆದಾಗ ಘರ್ಷಣೆ ಪ್ರಾರಂಭವಾಗಿದೆ. ತಮಿಳುನಾಡಿನಲ್ಲಿ ಪ್ಯಾಕೆಟ್ ಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದ್ದು, ಅಧಿಕಾರಿಗಳು ತಕ್ಷಣ ಕ್ರಮ ತೆಗೆದುಕೊಂಡಿದ್ದಾರೆ.
ಪುದುಚೇರಿ ಸರ್ಕಾರ ನೀಡಿದ ಮಾನ್ಯ ಪರವಾನಗಿಯ ಅಡಿಯಲ್ಲಿ ಆಂಡಿಯರ್ ಪಾಳ್ಯಂನ ರಾಜಾ ನಿರ್ವಹಿಸುತ್ತಿರುವ ಮಧುಕ್ಕರೈನಲ್ಲಿರುವ ವೈನ್ ಶಾಪ್ ಗೆ 10 ಅಧಿಕಾರಿಗಳ ತಂಡ ದಾಳಿ ಮಾಡಿದೆ. ತಮಿಳುನಾಡು ಪೊಲೀಸರು ಆವರಣದಲ್ಲಿ ಹಠಾತ್ ಶೋಧ ನಡೆಸಿ ೪೦ ಲೀಟರ್ ಮದ್ಯದ ಪ್ಯಾಕೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj