ಪುನೀತ್ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಎನ್ನುವ ನೋವು ಕಾಡುತ್ತಿದೆ | ತಮಿಳು ನಟ ವಿಜಯ್ ಸೇತುಪತಿ
ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರು ನಿಧನರಾಗಿರುವ ವಿಚಾರ ತಿಳಿದು ನಿಜಕ್ಕೂ ನನಗೆ ಶಾಕ್ ಆಯಿತು. ಅವರು ಆಸ್ಪತ್ರೆಯಲ್ಲಿದ್ದ ವಿಚಾರ ನನಗೆ ಇಳಿದಿತ್ತು. ಅವರು ತುಂಬಾ ಸ್ಟ್ರಾಂಗ್ ಆಗಿರುವ ಮನುಷ್ಯ ಹಾಗಾಗಿ ಅವರು ಗುಣಮುಖರಾಗಿ ಬರುತ್ತಾರೆ ಎಂದೇ ನಾನು ಭಾವಿಸಿದ್ದೆ ಎಂದು ತಮಿಳು ಖ್ಯಾತ ನಟ ವಿಜಯ್ ಸೇತುಪತಿ ಹೇಳಿದರು.
ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ಪುನೀತ್ ರಾಜ್ ಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಿದ ವಿಜಯ್ ಸೇತುಪತಿ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದರು. ಒಂದು ಬಾರಿ ಪುನೀತ್ ಸರ್ ಜೊತೆಗೆ ಫೋನ್ ನಲ್ಲಿ ಮಾತನಾಡಿದ್ದೇನೆ. ನನ್ನ ಸಿನಿಮಾವನ್ನು ನೋಡಿ ಕರೆ ಮಾಡಿ ಮಾತನಾಡಿದ್ದರು. ಒಂದು ಬಾರಿ ಭೇಟಿಯಾಗೋಣ ಎಂದು ಕೂಡ ಹೇಳಿದ್ದರು. ಆದರೆ ಅಷ್ಟರಲ್ಲೇ ಇಂತಹದ್ದೊಂದು ಘಟನೆ ನಡೆದು ಹೋಗಿದೆ ಎಂದು ವಿಜಯ್ ಸೇತುಪತಿ ಬೇಸರ ವ್ಯಕ್ತಪಡಿಸಿದರು.
ಪುನೀತ್ ಸರ್ ನಿಧನದ ಸುದ್ದಿ ತಿಳಿದಾಗ ನಾನು ಮುಂಬೈಯಲ್ಲಿದ್ದೆ. ಹಾಗಾಗಿ ಆಗಲೇ ಬರಲು ಸಾಧ್ಯವಾಗಲಿಲ್ಲ. ಅವರ ಸಿನಿಮಾಗಳ ಬಗ್ಗೆ ಮಾತ್ರವೇ ನನಗೆ ತಿಳಿದಿತ್ತು. ಆದರೆ ಅವರು ನಿಧನರಾದ ಬಳಿಕವೇ ಅವರು ಎಂತಹ ಚಿನ್ನದಂತಹ ಮನುಷ್ಯ ಎನ್ನುವುದು ನನಗೆ ತಿಳಿದದ್ದು. ನನಗೆ ಆ ವಿಡಿಯೋಗಳನ್ನು ನೋಡಿ ತೀವ್ರವಾಗಿ ನೋವಾಯಿತು ಎಂದು ಅವರು ಹೇಳಿದರು.
ನಾನು ಇಲ್ಲಿಯವರೆಗೆ ಅವರನ್ನು ಭೇಟಿ ಮಾಡಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ನನಗೇ ಇಷ್ಟೊಂದು ನೋವಾಗುತ್ತಿದ್ದರೆ, ಪುನೀತ್ ರಾಜ್ ಕುಮಾರ್ ಅವರ ಕುಟುಂಬಕ್ಕೆ ಎಷ್ಟು ನೋವಾಗಿರಬಹುದು. ಅವರ ಸಾವನ್ನು ಸ್ವೀಕರಿಸಲೇ ಸಾಧ್ಯವಾಗಲಿಲ್ಲ. ಅವರನ್ನು ಮುಖಾಮುಖಿಯಾಗಿ ಭೇಟಿ ಮಾಡಲು ಸಾಧ್ಯವಾಗಲಿಲ್ಲವಲ್ಲ ಎಂದು ನನಗೆ ತೀವ್ರವಾಗಿ ನೋವಾಗಿದೆ ಎಂದು ಅವರು ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka