ಪುನೀತ್ ಬದಲು ನನ್ನನ್ನಾದರೂ ಕರೆಯಬಾರದಿತ್ತೇ? | ಪರಮಾತ್ಮ ನೀನು ಹೀಗೆ ಮಾಡಬಾರದಿತ್ತು | ಭಾವುಕರಾದ ಜನಾರ್ದನ ಪೂಜಾರಿ
ಮಂಗಳೂರು: ಪುನೀತ್ ರಾಜ್ ಕುಮಾರ್ ಅವರನ್ನು ದೇವರು ಯಾಕೆ ಇಷ್ಟು ಬೇಗ ಕರೆಸಿಕೊಂಡರು. ಇಳಿಯವಯಸ್ಸಿನ ನನ್ನನ್ನಾದರೂ ಕರೆಸಿಕೊಂಡು ಆ ಮಗುವನ್ನು ಉಳಿಸಬಾರದಿತ್ತೇ? ಎಂದು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಗದ್ಗದಿತರಾದರು.
ನಗರದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಸಭಾಭವನದಲ್ಲಿ ಮಂಗಳವಾರ ನಡೆದ ಪುನೀತ್ ನುಡಿನಮನ ಕಾರ್ಯಕ್ರಮದಲ್ಲಿ ಭಾವುಕರಾದ ಜನಾರ್ದನ ಪೂಜಾರಿ, 84 ವರ್ಷದ ನಾನಿದ್ದೆ. ನನ್ನನ್ನಾದರೂ ಕರೆದುಕೊಂಡು ಹೋಗಬಾರದಿತ್ತೇ? ಪರಮಾತ್ಮ ನೀನು ಹಾಗೆ ಮಾಡಬಾರದಿತ್ತು. ನಾವು ಮತ್ತೆ ಆ ಮುತ್ತನ್ನು(ಅಪ್ಪು) ಪಡೆಯಲು ಸಾಧ್ಯವಿಲ್ಲ ಎಂದು ಅವರು ಕಣ್ಣೀರು ಹಾಕಿದರು.
ವಿಧಿ ಯಾಕೆ ಇಷ್ಟೊಂದು ಕ್ರೂರತನ ಮೆರೆಯಿತು? ಪುನೀತ್ ರಾಜ್ ಕುಮಾರ್ ಅವರನ್ನು ಕರೆತರಲು ಸಾಧ್ಯವಾಗದ ಲೋಕಕ್ಕೆ ಅವರು ಹೋಗಿದ್ದಾರೆ. ಪುನೀತ್ ನಮ್ಮನ್ನೆಲ್ಲ ಬಿಟ್ಟು ದೂರ ಹೋಗಿದ್ದಾರೆ. ಪರಮಾತ್ಮ ನೀನು ಹೀಗೆ ಮಾಡಬಾರದಿತ್ತು ಎಂದು ಅವರು ತೀವ್ರವಾಗಿ ನೋವು ವ್ಯಕ್ತಪಡಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka