ಪುನೀತ್ ಬಳಿಕ ರಾಜ್ಯ ಸರ್ಕಾರದ ವಿರುದ್ಧ ನಟ ಯಶ್ ಆಕ್ರೋಶ
ಬೆಂಗಳೂರು: ಸಿನಿಮಾ ಥಿಯೇಟರ್ ಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿರುವುದರ ವಿರುದ್ಧ ಪುನೀತ್ ರಾಜ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ ಬಳಿಕ ರಾಕಿಂಗ್ ಸ್ಟಾರ್ ಯಶ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರ ತನ್ನ ನಿರ್ಧಾರವನ್ನು ಪುನರ್ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಜವಾಬ್ದಾರಿಯೂ ಇದೆ. ಹಸಿವಿಗಿಂತ ದೊಡ್ಡ ಕಾಯಿಲೆ ಇಲ್ಲ. ನಿಬಂಧನೆಗಳು ನಮ್ಮ ಬದುಕಿಗೆ ಸಹಾಯವಾಗಬೇಕೆ ಹೊರತು ಮುಳುವಾಗಬಹುದು. ಚಿತ್ರರಂಗದ ಮೇಲಿನ ಹಠಾತ್ ಧೋರಣೆ ಖಂಡನೀಯ. ಎಲ್ಲರಿಗೂ ದುಡಿಯುವ ಅವಕಾಶ ಇದೆ. ಚಿತ್ರರಂಗಕ್ಕೆ ಯಾಕಿಲ್ಲ? ಸೂಚನೆ ಕೊಡದೆ ಜಾರಿ ಮಾಡಿರುವ ನಿಬಂಧನೆಗಳಿಂದ ಚಿತ್ರರಂಗ ಬಲಿ ಎಂದು ಯಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೊನಾ ಲಸಿಕೆ ಬಂದಿದ್ದರೂ ಕೂಡ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ವಿಫಲವಾಗಿದೆ. ಕೊರೊನಾದ ಮೊದಲ ಅಲೆ ಅಪ್ಪಳಿಸಿದಾಗ ಕೊರೊನಾಕ್ಕೆ ಲಸಿಕೆ ಇಲ್ಲ ಎನ್ನುವ ಕಾರಣಕ್ಕೆ ಹೆಚ್ಚಿನ ಎಚ್ಚರಿಕೆ ಕ್ರಮದ ಅಗತ್ಯವಿತ್ತು. ಇದೀಗ ಕೊರೊನಾ ಲಸಿಕೆ ಬಂದಿದೆ, ಜನರು ಕೊರೊನಾ ಬಗ್ಗೆ ಜಾಗೃತಿ ಹೊಂದಿದ್ದಾರೆ, ಕೊರೊನಾ ಜೊತೆಗೆ ಬದುಕಲು ಕಲಿತಿದ್ದಾರೆ ಇಂತಜ ಸಂದರ್ಭದಲ್ಲಿ ಸರ್ಕಾರದ ಮೂಢತನಕ್ಕೆ ಚಿತ್ರರಂಗವನ್ನು ಬಲಿಕೊಡಬೇಕೇ? ಎನ್ನುವ ಪ್ರಶ್ನೆಗಳು ಇದೀಗ ಕೇಳಿ ಬಂದಿದೆ.