ಪುನೀತ್ ರಾಜ್ ಕುಮಾರ್ ಅವರ ವಿಶೇಷ ಚೇತನ ಅಭಿಮಾನಿ ಇನ್ನಿಲ್ಲ
03/06/2021
ಹೊಸಪೇಟೆ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಯಾಗಿದ್ದ ವಿಶೇಷ ಚೇತನ ಬಾಲ ಅಭಿಮಾನಿ 16 ವರ್ಷ ವಯಸ್ಸಿನ ಆದರ್ಶ್ ಅವರು ನಾನಾ ಅನಾರೋಗ್ಯಗಳ ಹಿನ್ನೆಲೆಯಲ್ಲಿ ನಿಧನರಾಗಿದ್ದಾರೆ.
ಜನನ ಕಾಲದಿಂದಲೇ ನಾನಾ ಅನಾರೋಗ್ಯಗಳಿಂದ ಬಳಲುತ್ತಿದ್ದಆದರ್ಶ್ ಅವರು, ಬಾಲ್ಯದಿಂದಲೇ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಯಾಗಿದ್ದರು. ಪುನೀತ್ ರಾಜ್ ಕುಮಾರ್ ಅವರನ್ನು ನೋಡಬೇಕು ಎನ್ನುವ ಆಸೆಯನ್ನಿಟ್ಟುಕೊಂಡಿದ್ದರು.
ಇನ್ನೂ ಈ ವಿಚಾರ ಪುನೀತ್ ರಾಜ್ ಕುಮಾರ್ ಅವರಿಗೂ ತಿಳಿದು ಬಂದಿದೆ. ಅವರು ತಕ್ಷಣವೇ ತಮ್ಮ ವಿಶೇಷ ವಾಹನವನ್ನು ಆದರ್ಶ್ ಅವರ ಮನೆಗೆ ಕಳುಹಿಸಿ, ತಮ್ಮ ಬೆಂಗಳೂರಿನ ನಿವಾಸಕ್ಕೆ ಕರೆಸಿಕೊಳ್ಳುವ ಮೂಲಕ ಅವರ ಆಸೆಯನ್ನು ಪೂರೈಸಿದ್ದರು. ಜೊತೆಗೆ ಅವರ ಚಿಕಿತ್ಸೆಗೂ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಇದೀಗ ಆದರ್ಶ್ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.