ಪುನೀತ್ ರಾಜ್ ಕುಮಾರ್ ಅಸ್ವಸ್ಥರಾಗುವುದಕ್ಕೂ ಮೊದಲು ಏನೇನು ನಡೆದಿತ್ತು?
ಬೆಂಗಳೂರು: ನಿನ್ನೆ ಇಡೀ ರಾಜ್ಯದ ಜನತೆಯೇ ನೋವು ತುಂಬಿದ ಹೃದಯಗಳಿಂದ ಪುನೀತ್ ರಾಜ್ ಕುಮಾರ್ ಅವರ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಲೇ ಬೇಕಾಯಿತು. ನಿನ್ನೆ ತನಕ ನಗುಮುಖದೊಂದಿಗೆ ಓಡಾಡುತ್ತಿದ್ದ ಪುನೀತ್ ರಾಜ್ ಕುಮಾರ್ ಅವರು ಇನ್ನಿಲ್ಲ ಎನ್ನುವ ನೋವನ್ನು ಅರಗಿಸಿಕೊಳ್ಳುವುದು ಎಲ್ಲರಿಗೂ ಕಷ್ಟ ಎನ್ನುವುದು ಸತ್ಯವಾದ ಮಾತಾಗಿದೆ.
ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ಪುನೀತ್ ಅವರು ತಮ್ಮ ಮ್ಯಾನೇಜರ್ ಗೆ ಕರೆ ಮಾಡುತ್ತಾರೆ. ಆ ಬಳಿಕ ಎಲ್ಲಿದ್ದೀಯಾ? ಎಂದು ಕೇಳಿದ್ದಾರೆ. ಥಿಯೇಟರ್ ನಲ್ಲಿದ್ದೇನೆ ಎಂದು ಮ್ಯಾನೇಜರ್ ಹೇಳಿದ್ದು, ಈ ವೇಳೆ ಬೇಗ ಮನೆಗೆ ಬಾ, ರೆಡಿಯಾಗಿ ಭಜರಂಗಿ ಸಿನಿಮಾಗೆ ಹೋಗೋಣ ಎಂದು ಹೇಳಿದ್ದರು. ಆ ಬಳಿಕ, ಯಾಕೋ ಸ್ವಲ್ಪ ಸುಸ್ತಾಗ್ತಿದೆ ಬೇಗ ಬಾ ಎಂದು ಹೇಳಿದ್ದರು. ಇದು ಪುನೀತ್ ರಾಜ್ ಕುಮಾರ್ ಅವರು ಕೊನೆಯದಾಗಿ ಮಾತನಾಡಿದ ಮಾತುಗಳಾಗಿವೆ.
ನಿನ್ನೆ ಬಿಡುಗಡೆಯಾಗಿದ್ದ ಭಜರಂಗಿ ಸಿನಿಮಾಕ್ಕೆ 7:33 ವೇಳೆಗೆ ಟ್ವೀಟ್ ಮೂಲಕ ಪುನೀತ್ ರಾಜ್ ಕುಮಾರ್ ಶುಭಕೋರಿದ್ದರು. ಇದು ಅವರ ಕೊನೆಯ ಟ್ವೀಟ್ ಆಗಿತ್ತು.
ಗುರುವಾರ ರಾತ್ರಿ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಬರ್ತ್ ಡೇ ಪಾರ್ಟಿಗೆ ಪುನೀತ್ ರಾಜ್ ಕುಮಾರ್ ದಂಪತಿ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು. ಇದು ಪುನೀತ್ ರಾಜ್ ಕುಮಾರ್ ಅವರ ಕೊನೆಯ ಪಾರ್ಟಿಯಾಗಿತ್ತು.
ಭಜರಂಗಿ—2 ಸಿನಿಮಾ ಬಿಡುಗಡೆಗೂ ಮುನ್ನ ಅ.26ರಂದು ನಡೆದ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಅಣ್ಣ ಶಿವರಾಜ್ ಕುಮಾರ್, ನಟ ಯಶ್ ಜೊತೆಗೆ ಅಪ್ಪು ಸ್ಟೆಪ್ ಹಾಕಿದ್ದರು. ಅವರು ಲವಲವಿಕೆಯಿಂದಿದ್ದರು. ವೇದಿಕೆಯಲ್ಲಿ ಅಣ್ಣ ತಮ್ಮಂದಿರು ಪ್ರೀತಿಯ ಅಪ್ಪುಗೆ ನೀಡಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka