ಪುನೀತ್ ಅವರಿಗೆ ‘ಕರ್ನಾಟಕ ರತ್ನ’ದ ಜೊತೆಗೆ ರಾಷ್ಟ್ರಮಟ್ಟದ ಉನ್ನತ ಗೌರವಕ್ಕೂ ಶಿಫಾರಸು | ಸಿಎಂ ಬಸವರಾಜ್ ಬೊಮ್ಮಾಯಿ
ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಚಿರಸ್ಥಾಯಿ ಆಗಿಸಬೇಕು ಎಂಬುವುದು ಕರ್ನಾಟಕ ಸರ್ಕಾರದ ಅಭಿಲಾಷೆಯಾಗಿದ್ದು, ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ನೀಡಲಾಗುವುದು. ಜೊತೆಗೆ ರಾಷ್ಟ್ರಮಟ್ಟದ ಉನ್ನತ ಗೌರವಕ್ಕೂ ಶಿಫಾರಸು ಮಾಡುವ ನಿಟ್ಟಿನಲ್ಲಿ ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವುದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಎಂದು ಹೇಳಿದರು.
ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದ್ದ ಪುನೀತ್ ನಮ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಪುನೀತ್ ರಾಜ್ ಕುಮಾರ್ ಅವರ ಸಮಾಧಿಯನ್ನು ಡಾ.ರಾಜ್ ಕುಮಾರ್ ಹಾಗೂ ಪಾರ್ವತಮ್ಮ ಅವರ ಸಮಾಧಿಯ ಮಾದರಿಯಲ್ಲಿಯೇ ಅಭಿವೃದ್ಧಿ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಇನ್ನೂ ಬಸವರಾಜ್ ಬೊಮ್ಮಾಯಿ ಅವರು ಮಾತನಾಡುತ್ತಿರುವ ವೇಳೆ ಅಭಿಮಾನಿಯೊಬ್ಬರು, ಪುನೀತ್ ರಾಜ್ ಕುಮಾರ್ ಅವರಿಗೆ “ಕರ್ನಾಟಕ ರತ್ನ ಪ್ರಶಸ್ತಿ” ನೀಡಬೇಕು ಎಂದು ಜೋರಾಗಿ ಕೂಗಿದ್ದು, ಈ ವೇಳೆ ತಡ ಮಾಡದೇ ಬಸವರಾಜ್ ಬೊಮ್ಮಾಯಿ ಸರ್ಕಾರದ ತೆಗೆದುಕೊಂಡಿದ್ದ ನಿರ್ಧಾರಗಳನ್ನು ತಿಳಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG
ಇನ್ನಷ್ಟು ಸುದ್ದಿಗಳು
ಒಂದು ಕೆನ್ನೆಗೆ ಹೊಡೆದಾಗ ಇನ್ನೊಂದು ಕೆನ್ನೆ ತೋರಿಸಿದರೆ, ಸಿಗೋದು ಸ್ವಾತಂತ್ರ್ಯ ಅಲ್ಲ, ಭಿಕ್ಷೆ | ಮತ್ತೆ ಕಂಗನಾ ಟೀಕೆ
“ಸತ್ಯ ನುಡಿದಿದ್ದಕ್ಕೆ ಹಂಸಲೇಖ ಕ್ಷಮೆಯಾಚಿಸಿದರು” | ಹಂಸಲೇಖ ಅವರಿಗೆ ವ್ಯಕ್ತವಾಗುತ್ತಿದೆ ಭಾರೀ ಬೆಂಬಲ
ಪರೀಕ್ಷೆ ಬರೆದು ಪಾಸ್ ಆದ 104 ವರ್ಷದ ಕುಟ್ಟಿಯಮ್ಮಗೆ ಅಭಿನಂದನೆಗಳ ಮಹಾಪೂರ
ಅವನಿಗೆ ನನ್ನ ದೃಷ್ಟಿಯೇ ತಾಗಿತೇನೋ… | ಕಣ್ಣೀರು ಹಾಕುತ್ತಲೇ ಮಾತನಾಡಿದ ನಟ ಶಿವರಾಜ್ ಕುಮಾರ್
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ: 14 ರಾಜ್ಯಗಳ 76 ಸ್ಥಳಗಳಲ್ಲಿ ಜಾಲಾಡಿದ ಸಿಬಿಐ
ಕುಡಿದು ತೂರಾಡುತ್ತಾ, ತೊದಲು ಮಾತನಾಡುತ್ತಾ ಶಾಲೆಗೆ ಪಾಠ ಮಾಡಲು ಬಂದ ಶಿಕ್ಷಕ