ಪುನೀತ್ ರಾಜ್ ಕುಮಾರ್ ಅವರ ಬ್ಯಾನರ್ ಹರಿದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿತ!
ಚಿಕ್ಕಮಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬ್ಯಾನರ್ ಹರಿದ ಯುವಕನೊಬ್ಬನಿಗೆ ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಗರದ ಮಾರ್ಕೆಟ್ ರಸ್ತೆಯಲ್ಲಿ ನಡೆದಿದ್ದು, ಆತ ಹರಿದ ಫ್ಲೆಕ್ಸ್ ನ್ನೇ ಆತನಿಗೆ ಹೊದಿಸಿ ಠಾಣೆಗೆ ಎಳೆದು ತಂದಿದ್ದಾರೆ ಎಂದು ತಿಳಿದು ಬಂದಿದೆ.
ವರದಿಗಳ ಪ್ರಕಾರ, ಆಕ್ರೋಶದಲ್ಲಿದ್ದ ಸಾರ್ವಜನಿಕರು, ಪುನೀತ್ ಅಭಿಮಾನಿಗಳು ಯುವಕನಿಗೆ ರಸ್ತೆಯುದ್ದಕ್ಕೂ ಥಳಿಸುತ್ತಲೇ ಠಾಣೆಗೆ ಎಳೆದು ತಂದಿದ್ದಾರೆನ್ನಲಾಗಿದೆ. ಯುವಕ ಫ್ಲೆಕ್ಸ್ ಹರಿಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎನ್ನಲಾಗಿದೆ.
ಪುನೀತ್ ರಾಜ್ ಕುಮಾರ್ ಅವರ ಬ್ಯಾನರ್ ಹರಿದು, ದುರ್ವರ್ತನೆ ತೋರಿರುವ ಯುವಕನ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಹಾಗೂ ಪುನೀತ್ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಶವಾಗಾರದ ಫ್ರೀಜರ್ ನಿಂದ ಹೊರ ತೆಗೆದಾಗ ಸತ್ತ ವ್ಯಕ್ತಿ ಜೀವಂತ!
ಮೋದಿಜಿ ಬಾಲಿವುಡ್ ನಲ್ಲಿರುತ್ತಿದ್ದರೆ, ಎಲ್ಲ ಪ್ರಶಸ್ತಿ ಅವರೇ ಗೆಲ್ಲುತ್ತಿದ್ದರು | ಅಸಾದುದ್ದೀನ್ ಓವೈಸಿ ವ್ಯಂಗ್ಯ
ಪ್ರವಾಹದಲ್ಲಿ ಸಿಲುಕಿದ್ದವರನ್ನು ರಕ್ಷಿಸುತ್ತಲೇ ನೀರುಪಾಲಾದ ಪೊಲೀಸ್ ಅಧಿಕಾರಿ ಸಾವು
ದೈಹಿಕ ಸಂಬಂಧ ಬೆಳೆಸಿದ ಬಳಿಕ ಜಾತಕ ಸರಿ ಹೊಂದುವುದಿಲ್ಲ ಎಂದು ಮದುವೆಗೆ ನಿರಾಕರಣೆ: ಯುವಕನ ವಿರುದ್ಧ ದೂರು