ಪುನೀತ್ ರಾಜ್ ಕುಮಾರ್ ಮನೆಗೆ ಭೇಟಿ ನೀಡಲಿರುವ ಅಲ್ಲು ಅರ್ಜುನ್: ಅಂದೇಕೆ ಭೇಟಿ ನೀಡಿರಲಿಲ್ಲ ಗೊತ್ತಾ?

allu arjun
03/02/2022

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಮನೆಗೆ ಇಂದು ತೆಲುಗು ನಟ ಅಲ್ಲು ಅರ್ಜುನ್ ಭೇಟಿ ನೀಡಲಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ.

ಪುಷ್ಪಂ ಚಿತ್ರದ ಪ್ರಚಾರಕ್ಕೆ ಬೆಂಗಳೂರಿಗೆ ಆಗಮಿಸಿದ್ದ ಅಲ್ಲು ಅರ್ಜುನ್, ಆ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿರಲಿಲ್ಲ. ಅಪ್ಪು ಜೊತೆಗೆ ಉತ್ತಮ ಒಡನಾಟ ಹೊಂದಿದ್ದ, ಬೇರೆ ಭಾಷೆಯ ನಟರ ಪೈಕಿ ಅಲ್ಲು ಅರ್ಜುನ್ ಕೂಡ ಒಬ್ಬರಾಗಿದ್ದಾರೆ. ಇಷ್ಟು ಒಡನಾಟವಿದ್ದರೂ ಯಾಕೆ ಪುನೀತ್ ರಾಜ್ ಕುಮಾರ್ ಮನೆಗೆ ಅವರು ಭೇಟಿ ನೀಡಲಿಲ್ಲ ಎನ್ನುವ ಪ್ರಶ್ನೆಗಳು ಕೇಳಿ ಬಂದಿದ್ದವು.

ಪುಷ್ಪಂ ಚಿತ್ರದ ಪ್ರಚಾರಕ್ಕೆ ಆಗಮಿಸಿದ ವೇಳೆ ಅಪ್ಪು ಮನೆಗೆ ಭೇಟಿ ನೀಡಿದರೆ, ಚಿತ್ರದ ಪ್ರಚಾರಕ್ಕಾಗಿ ಪುನೀತ್ ಮನೆಗೆ ಭೇಟಿ ನೀಡಿದರು ಎನ್ನುವ ಅಪವಾದಗಳು ಬರಬಹುದು ಎನ್ನುವ ಕಾರಣಕ್ಕಾಗಿ ಅವರು ಭೇಟಿ ನೀಡಿರಲಿಲ್ಲ ಎನ್ನಲಾಗಿದೆ. ಇದೀಗ  ಪುನೀತ್ ಮನೆಗೆ ಅವರು ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

3 ವರ್ಷದ ಮಗುವನ್ನು ಕರಡಿ ಬೋನಿಗೆ ಎಸೆದ ತಾಯಿ: ಸಿಸಿ ಕ್ಯಾಮರದಲ್ಲಿ ಭಯಾನಕ ದೃಶ್ಯ ಸೆರೆ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್:  ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ

ಪ್ರತಿ ಮದುವೆ ಹಿಂಸೆ, ಪ್ರತಿ ಪುರುಷ ಅತ್ಯಾಚಾರಿ ಎನ್ನಲು ಸಾಧ್ಯವಿಲ್ಲ | ಸ್ಮೃತಿ ಇರಾನಿ

ಚಿಕನ್ ಫಾಕ್ಸ್: ಒಂದೇ ಕುಟುಂಬದ ಇಬ್ಬರು ಬಾಲಕರ ಸಾವು

ಉದ್ಯಮಿಗೆ ಬ್ಯಾಂಕ್ ಕೆ ವೈ ಸಿ ಹೆಸರಿನಲ್ಲಿ 13 ಲಕ್ಷ ರೂ. ವಂಚನೆ

ಇತ್ತೀಚಿನ ಸುದ್ದಿ

Exit mobile version