ಪುನೀತ್ ಸಮಾಧಿ ಮುಂದೆ ಮದುವೆಯಾಗಲು ಯಾಕೆ ಒಪ್ಪಿಗೆ ನೀಡಿಲ್ಲ? | ಇಲ್ಲಿದೆ ಕಾರಣ
ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರ ಸಮಾಧಿ ಮುಂದೆ ಮದುವೆಯಾಗಲು ಬಳ್ಳಾರಿಯಿಂದ ಪ್ರೇಮಿಗಳಿಬ್ಬರು ಆಗಮಿಸಿದ್ದು, ಆದರೆ, ಪುನೀತ್ ರಾಜ್ ಕುಮಾರ್ ಕುಟುಂಬ ಇದಕ್ಕೆ ಒಪ್ಪಿಗೆ ನೀಡಲಿಲ್ಲ. ರಾಘವೇಂದ್ರ ರಾಜ್ ಕುಮಾರ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಮದುವೆಯಾಗಲು ಬಂದ ಜೋಡಿ ಒಂದೊಂದು ಸಲ ಒಂದೊಂದು ರೀತಿಯಾಗಿ ಮಾತನಾಡುತ್ತಿತ್ತು. ಹಾಗಾಗಿ ನಾವು ಒಪ್ಪಿಗೆ ಕೊಡಲಿಲ್ಲ. ಇನ್ನೂ ಪೊಲೀಸರದ್ದು ಒಂದೊಂದು ನಿಯಮಗಳು ಕೂಡ ಇರುತ್ತವೆ. ಕೆಲವರು ಅಪ್ರಾಪ್ತ ವಯಸ್ಸಿನವರಾಗಿರುತ್ತಾರೆ. ಅಪ್ಪು ಸಮಾಧಿ ಎದುರು ಮದುವೆಯಾಗಿ ಕೊನೆಯಲ್ಲಿ ಅವರ ಕುಟುಂಬಸ್ಥರು ಬಂದು ಗಲಾಟೆ ಮಾಡಿದರೆ ಚೆನ್ನಾಗಿರಲ್ಲ ಎಂದರು.
ಟಿವಿಯಲ್ಲಿ ಒಂದು ಮದುವೆ ನೋಡಿದ ಬಳಿಕ ಅನೇಕರು ಬರಲು ಆರಂಭಿಸುತ್ತಾರೆ. ಆದ್ದರಿಂದ ಈ ಮದುವೆಗೆ ಅನುಮತಿ ನೀಡಲಿಲ್ಲ. ಆದರೆ ಒಂದು ವೇಳೆ ಇಲ್ಲಿ ಬಂದು ಮದುವೆಯಾಗಲೇಬೇಕು ಎನ್ನುವ ಜೋಡಿಗಳು ತಮ್ಮ ಜತೆ ತಂದೆ-ತಾಯಿ ಮತ್ತು ಕುಟುಂಬರಸ್ಥರನ್ನು ಕರೆತರಬೇಕು. ಹಾಕಿದ್ದರೆ ಅನುಮತಿ ಕೊಡಬಹುದು ಎಂದು ಅವರು ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka