ಪುನೀತ್ ಸಮಾಧಿಗೆ ನಮನ ಸಲ್ಲಿಸಿ ಗದ್ಗದಿತರಾದ ತಮಿಳು ಖ್ಯಾತ ನಟ ಸೂರ್ಯ
ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ತಮಿಳಿನ ಖ್ಯಾತ ನಟ ಸೂರ್ಯ ಬೆಂಗಳೂರಿಗೆ ಆಗಮಿಸಿ ಅವರ ಸಮಾಧಿಗೆ ಹೂವಿನ ಹಾರ ಹಾಕಿ ನಮನ ಸಲ್ಲಿಸಿದರು. ಅಪ್ಪು ಕುಟುಂಬದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ನಟ ಸೂರ್ಯ ಅವರು ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ಗದ್ಗದಿತರಾದರು.
ಈ ರೀತಿಯ ಘಟನೆಯೊಂದು ನಡೆಯಲೇ ಬಾರದಿತ್ತು. ಇನ್ನು ಕೂಡ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅವರ ಕುಟುಂಬ ಹಾಗೂ ಅಣ್ಣವ್ರು ಇವರ ಜೊತೆಗೆ ನಮ್ಮ ಕುಟುಂಬ ಉತ್ತಮ ಬಾಂಧವ್ಯ ಹೊಂದಿತ್ತು. ಆ ನೆನಪುಗಳು ಹಾಗೆಯೇ ಇನ್ನೂ ಇದೆ ಎಂದು ಸೂರ್ಯ ಹೇಳಿದರು.
ನಮ್ಮ ಮನೆಯಲ್ಲಿ ಅಪ್ಪ ಅಮ್ಮ ಯಾರಿಗೂ ಈ ಘಟನೆಯನ್ನು ನಂಬಲು ಸಾಧ್ಯವಾಗಲಿಲ್ಲ. ಅವರ ಯಾವ ಫೋಟೋ, ಯಾವ ವಿಡಿಯೋ ನೋಡಿದರೂ ಅವರ ನಗು ಮುಖವೇ ಕಾಣುತ್ತದೆ. ಅವರ ಎಲ್ಲ ನೆನಪುಗಳು ನಮ್ಮ ಹೃದಯದಲ್ಲಿರುತ್ತದೆ ಎನ್ನುತ್ತಾ ನಟ ಸೂರ್ಯ ಗದ್ಗದಿತರಾದರು.
ಅವರ ಕುಟುಂಬದೊಂದಿಗೆ ಶಿವಣ್ಣ ಇದ್ದಾರೆ, ಮಾತ್ರವಲ್ಲದೇ ಕನ್ನಡಿಗರು, ನಾವೆಲ್ಲರೂ ಇದ್ದೇವೆ ಎಂದು ನಟ ಸೂರ್ಯ ಇದೇ ಸಂದರ್ಭದಲ್ಲಿ ಹೇಳಿದರು. ಈ ವೇಳೆ ನಟ ಶಿವರಾಜ್ ಕುಮಾರ್ ಅವರು ಕೂಡ ಸೂರ್ಯ ಅವರ ಜೊತೆಗಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka