ಪುನೀತ್ ಗೆ ಅವಮಾನ ಆರೋಪ: “ಅದು ಶಾಂಪೇನ್ ಬಾಟಲಿ ಆಗಿರಲಿಲ್ಲ” | ರಕ್ಷಿತಾ ಪ್ರೇಮ್ ಸ್ಪಷ್ಟನೆ - Mahanayaka

ಪುನೀತ್ ಗೆ ಅವಮಾನ ಆರೋಪ: “ಅದು ಶಾಂಪೇನ್ ಬಾಟಲಿ ಆಗಿರಲಿಲ್ಲ” | ರಕ್ಷಿತಾ ಪ್ರೇಮ್ ಸ್ಪಷ್ಟನೆ

rakshitha preem
14/11/2021

ಬೆಂಗಳೂರು:  “ಏಕ್ ಲವ್ ಯಾ” ಚಿತ್ರದ ವೇದಿಕೆಯಲ್ಲಿ ಪುನೀತ್ ರಾಜ್ ಕುಮಾರ್ ಚಿತ್ರದ ಮುಂದೆಯೇ ಶಾಂಪೇನ್ ಬಾಟಲಿ ಓಪನ್ ಮಾಡಿ ಅವಮಾನ ಮಾಡಲಾಗಿದೆ ಎಂಬ ಮಾಧ್ಯಮಗಳ ಆರೋಪಕ್ಕೆ ಸಂಬಂಧಿಸಿದಂತೆ ರಕ್ಷಿತಾ ಪ್ರೇಮ್ ಅವರು ಸ್ಪಷ್ಟನೆ ನೀಡಿದ್ದಾರೆ.

ರಕ್ಷಿತಾ ಪ್ರೇಮ್ ಅವರ ಸಹೋದರ ರಾಣ ನಟಿಸಿಸಿರುವ  ‘ಏಕ್ ಲವ್ ಯಾ’ ಚಿತ್ರದ ಸುದ್ದಿಗೋಷ್ಠಿಯ ವೇಳೆ ಚಿತ್ರ ತಂಡ ಶಾಂಪೇನ್ ಬಾಟಲಿ ಓಪನ್ ಮಾಡಿ ಪುನೀತ್ ರಾಜ್ ಕುಮಾರ್ ಅವರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಆದರೆ, “ಅದು ಶಾಂಪೇನ್ ಬಾಟಲಿ ಅಲ್ಲ” ಎಂದು ರಕ್ಷಿತಾ ಸ್ಪಷ್ಟನೆ ನೀಡಿದ್ದಾರೆ.

ನಾನು ಓಪನ್ ಮಾಡಿರುವ ಬಾಟಲಿ ಶಾಂಪೇನ್(ಮದ್ಯ) ಬಾಟಲಿ ಆಗಿರಲಿಲ್ಲ. ಅದು ನಾನ್ ಆಲ್ಕೋಹಾಲಿಕ್(ಮದ್ಯ ಅಲ್ಲದ) ಬಾಟಲಿಯಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ನವೆಂಬರ್ 12ರಂದು ನಡೆದಿದ್ದ ಕಾರ್ಯಕ್ರಮದಲ್ಲಿ ಹಾಡೊಂದನ್ನು ಬಿಡುಗಡೆ ಮಾಡಲಾಗಿತ್ತು. ಈ ವೇಳೆ ಬಾಟಲಿಯೊಂದನ್ನು ತೆರೆಯಲಾಗಿತ್ತು. ಇದು ಶಾಂಪೇನ್ ಬಾಟಲಿ ಎಂದು ಮಾಧ್ಯಮಗಳು ವರದಿ ಬಿತ್ತರ ಮಾಡಿತ್ತು. ತಕ್ಷಣದಲ್ಲಿ ನಡೆದ ಘಟನೆಯಿಂದ ನೊಂದ ಚಿತ್ರ ತಂಡ ಕ್ಷಮೆಯಾಚಿಸಿತ್ತು. ಇದೀಗ ಅದು ಶಾಂಪೇನ್ ಬಾಟಲಿ ಆಗಿರಲಿಲ್ಲ ಎಂದು ರಕ್ಷಿತಾ ಸ್ಪಷ್ಟನೆ ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಇನ್ನಷ್ಟು ಸುದ್ದಿಗಳು

ಪುನೀತ್ ಎಲ್ಲ ಚಿತ್ರಗಳಲ್ಲಿಯೂ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದಾರೆ | ರಮೇಶ್ ಜಾರಕಿಹೊಳಿ ಭಾವುಕ

ಗೋವು, ಸೆಗಣಿ, ಗೋಮೂತ್ರ ಆರ್ಥಿಕತೆಯನ್ನು ಬಲಪಡಿಸುತ್ತದೆ: ಶಿವರಾಜ್ ಸಿಂಗ್ ಚೌಹಾಣ್ ಹೇಳಿಕೆ

ನಿರಂತರ ಮಳೆಗೆ ಕುಸಿದು ಬಿದ್ದ ಗೋಡೆ: ಯುವ ದಂಪತಿಯ ದಾರುಣ ಸಾವು

ದತ್ತ ಮಾಲಾಧಾರಿಗಳಿದ್ದ ಬಸ್ ಗೆ ಕಿಡಿಗೇಡಿಗಳಿಂದ ಕಲ್ಲು ತೂರಾಟ!

ನನ್ನ ಸಾವಿಗೆ ಪಕ್ಷದ ಮುಖಂಡರೇ ಕಾರಣ ಎಂದು ಸ್ಟೇಟಸ್ ಹಾಕಿ ಕಾಂಗ್ರೆಸ್ ಸದಸ್ಯೆ ಆತ್ಮಹತ್ಯೆಗೆ ಯತ್ನ!

ಪ್ಲೈಓವರ್ ನಲ್ಲಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ಹಾಲಿನ ವಾಹನ ಡಿಕ್ಕಿ: ಇಬ್ಬರು ಯುವಕರ ದಾರುಣ ಸಾವು

ಇತ್ತೀಚಿನ ಸುದ್ದಿ