ಪವಿತ್ರ ನೀರು ಕುಡಿದ ಪಂಜಾಬ್ ಸಿಎಂಗೆ ಸೋಂಕು: ಆಸ್ಪತ್ರೆಗೆ ದಾಖಲು
ಪಂಜಾಬ್: ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಹೊಟ್ಟೆಯಲ್ಲಿ ಸೋಂಕಿನಿಂದ ದೆಹಲಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಇದಾದ ಬೆನ್ನಲ್ಲೇ ಅವರು ಕೊಳಚೆ ನೀರು ಕುಡಿಯುತ್ತಿರುವ ವಿಡಿಯೋ ಕೂಡ ಚರ್ಚೆಯಾಗುತ್ತಿದೆ. ಆಮ್ ಆದ್ಮಿ ಪಾರ್ಟಿ ಪಂಜಾಬ್ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ಮುಖ್ಯಮಂತ್ರಿ ನದಿಯಿಂದ ಒಂದು ಲೋಟ ನೀರನ್ನು ಕುಡಿಯುತ್ತಿರುವ ದೃಶ್ಯ ಸೆರೆಯಾಗಿದೆ.
ಕಳೆದ ಭಾನುವಾರ ಘಟನೆ ನಡೆದಿದ್ದು,ಖ್ಯಾತ ಪರಿಸರ ಕಾರ್ಯಕರ್ತ ಮತ್ತು ರಾಜ್ಯಸಭಾ ಸಂಸದ ಬಾಬಾ ಬಲ್ಬೀರ್ ಸಿಂಗ್ ಸೀಚೆವಾಲ್ ಅವರು ಮುಖ್ಯಮಂತ್ರಿಯನ್ನು ಸ್ವಚ್ಛತೆಯ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ನಂತರ ಅವರಿಗೆ ಪವಿತ್ರ ನದಿಯ ನೀರನ್ನು ಲೋಟದಲ್ಲಿ ನೀಡಲಾಗಿತ್ತು. ಈ ನೀರನ್ನು ಸಿಎಂ ಕುಡಿದಿದ್ದರು.
ಪಟ್ಟಣಗಳಿಂದ ಮತ್ತು ಹಳ್ಳಿಗಳ ಚರಂಡಿಯ ನೀರು ಬಂದು ಸೇರುವ ನದಿಯ ಮಿಶ್ರಿತ ನೀರನ್ನು ಪಂಜಾಬ್ ನ ಮುಖ್ಯಮಂತ್ರಿ ಯಾವುದೇ ಹಿಂಜರಿಕೆಯಿಲ್ಲದೆ ಕುಡಿದರು. ಇದಾದ ಬಳಿಕ ಅವರ ಆರೋಗ್ಯದಲ್ಲಿ ಏರುಪಾರಾದ ಹಿನ್ನೆಲೆ ಚಿಕಿತ್ಸೆಗಾಗಿ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.
‘ಗುರುನಾನಕ್ ಸಾಹಿಬ್ ಅವರ ಪಾದ ಸ್ಪರ್ಶಿಸಿದ ನಾಡು ಸುಲ್ತಾನ್ ಪುರ ಲೋಧಿಯಲ್ಲಿ ಮುಖ್ಯಮಂತ್ರಿ ಭಗವಂತಮಾನ್ ಪವಿತ್ರ ನೀರು ಕುಡಿಯುತ್ತಿದ್ದಾರೆ’ ಎಂದು ಆಮ್ ಆದ್ಮಿ ಪಕ್ಷದ ಪಂಜಾಬ್ ಘಟಕ ಟ್ವೀಟ್ ಮಾಡಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka